ಐಪಿಎಲ್ ನಲ್ಲಿ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್
ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುವ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ನಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ದಾಖಲೆ ಮಾಡಿದ್ದಾರೆ. ಉಳಿದಂತೆ ಲಸಿತ್ ಮಾಲಿಂಗ, ಡ್ವಾನ್ ಬ್ರಾವೋ ಈ ಸಾಧನೆ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧ ಭುವಿ 3 ವಿಕೆಟ್ ಕಬಳಿಸಿದ್ದಾರೆ. ಪಂಜಾಬ್ 20 ಓವರ್ ಗಳಲ್ಲಿ151 ರನ್ ಗಳಿಗೆ ಆಲೌಟ್ ಆಗಿದೆ.