ಐಪಿಎಲ್ 2022: ಅಗ್ರಸ್ಥಾನಿ ಗುಜರಾತ್ ಗೆ ಚೆನ್ನೈ ಎದುರಾಳಿ

ಭಾನುವಾರ, 17 ಏಪ್ರಿಲ್ 2022 (09:58 IST)
ಮುಂಬೈ: ಐಪಿಎಲ್ 2022 ರಲ್ಲಿ ಅಗ್ರಸ್ಥಾನದಲ್ಲಿ ಮೆರೆಯುತ್ತಿರುವ ಗುಜರಾತ್ ಟೈಟನ್ಸ್ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಗುಜರಾತ್ ಇದುವರೆಗೆ ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದೇ ಸೋಲು ಕಂಡಿದೆ. ಕಳೆದ ಪಂದ್ಯವನ್ನೂ ಗೆದ್ದು ಅಗ್ರಸ್ಥಾನಿಯಾಗಿರುವ ಗುಜರಾತ್ ಗೆ ನಾಯಕ ಹಾರ್ದಿಕ್ ಪಾಂಡ್ಯರೇ ಪ್ರಮುಖ ಶಕ್ತಿ.

ಈ ಟೂರ್ನಿಯಲ್ಲಿ ಕೇವಲ ಒಂದೇ ಗೆಲುವು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಈಗ ಗುಜರಾತ್ ಕಟ್ಟಿ ಹಾಕಲು ಧೋನಿಯ ಬುದ್ಧಿವಂತಿಕೆ ಬೇಕು. ಸ್ವತಃ ನಾಯಕ ರವೀಂದ್ರ ಜಡೇಜಾರಿಂದ ಖ್ಯಾತಿಗೆ ತಕ್ಕ ಆಟ ಬಂದಿಲ್ಲ. ಋತುರಾಜ್ ಗಾಯಕ್ ವಾಡ್ ಕೂಡಾ ರನ್ ಗಳಿಸುವ ಅನಿವಾರ್ಯತೆಯಲ್ಲಿದ್ದಾರೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ