ಟೀಂ ಇಂಡಿಯಾದಲ್ಲೂ ಮೀಸಲಾತಿಗೆ ಮೊರೆಯಿಟ್ಟ ಬಿಜೆಪಿ ಸಂಸದ!

ಶುಕ್ರವಾರ, 30 ಡಿಸೆಂಬರ್ 2016 (08:23 IST)
ನವದೆಹಲಿ: ದೇಶದಲ್ಲಿ ಸರ್ಕಾರದ ಯಾವುದೇ ಸವಲತ್ತುಗಳಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಮೀಸಲಾತಿ ಇದೆ. ಅದೇ ಮೀಸಲಾತಿ ಕ್ರಿಕೆಟ್ ನಲ್ಲೂ ಬರಬೇಕೆಂಬ ವಿಚಿತ್ರ ಬೇಡಿಕೆಯನ್ನು ಬಿಜೆಪಿ ಸಂಸದರೊಬ್ಬರು ಮುಂದಿಟ್ಟಿದ್ದಾರೆ.


ದೆಹಲಿ ವಾಯವ್ಯ ಪ್ರದೇಶದ ಸಂಸದ ಉದಿತ್ ರಾಜ್ ಇಂತಹ ವಿಚಿತ್ರ ಬೇಡಿಕೆಯಿಟ್ಟವರು. ಕೇವಲ ಪತ್ರಿಕೆಯಲ್ಲಿ ಹೇಳಿಕೆ ನೀಡಿರುವುದು ಮಾತ್ರವಲ್ಲ, ತನ್ನ ಬೇಡಿಕೆಯನ್ನು ಶೀಘ್ರದಲ್ಲೇ ಭಾರತದಲ್ಲಿ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಸಿಸಿಐ ಮತ್ತು ಪ್ರಧಾನಿ ನರೇಂದ್ರ ಮೋದಿಗೂ ತಲುಪಿಸುವುದಾಗಿ ಹೇಳಿಕೊಂಡಿದ್ದಾರೆ.

ಇದೇ ಸಂಸದರು ಹಿಂದೊಮ್ಮೆ ಭಾರತೀಯ ಅಥ್ಲಿಟ್ ಗಳು ಉಸೇನ್ ಬೋಲ್ಟ್ ರಂತೆ ಬೀಫ್ ತಿನ್ನಬೇಕು ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈಗ ಮತ್ತೊಮ್ಮೆ ತಮ್ಮ ಹರಕು ಬಾಯಿ ಬಿಟ್ಟಿದ್ದು, ಕ್ರಿಕೆಟ್ ತಂಡದಲ್ಲಿ ಮೀಸಲಾತಿ ಬಗ್ಗೆ ಮಾತನಾಡಿದ್ದಾರೆ.  ದೇಶದಲ್ಲಿ ಇನ್ನೂ ಯಾವುದಕ್ಕೆಲ್ಲಾ ಮೀಸಲಾತಿ ನೀಡಬೇಕೋ? ಕ್ರೀಡೆಯ ಗಂಧ ಗಾಳಿ ಗೊತ್ತಿಲ್ಲದವರು ಮಾತ್ರ ಇಂತಹ ಮಾತನಾಡಲು ಸಾಧ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ