ವಮಿಕಾಳನ್ನು ಡೇಟಿಂಗ್ ಕರೆದೊಯ್ಯಲು ಕೊಹ್ಲಿಗೆ ಮನವಿ ಮಾಡಿದ ಬಾಲಕ!
ಮೊನ್ನೆಯಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ ಆರ್ ಸಿಬಿ ಆಟಗಾರ ಕೊಹ್ಲಿಗೆ ಬಾಲಕ ಅಭಿಮಾನಿಯೊಬ್ಬ ವಿಶಿಷ್ಟ ಮನವಿ ಸಲ್ಲಿಸಿದ್ದಾನೆ.
ಕೊಹ್ಲಿ ಪುತ್ರಿ ವಮಿಕಾಳನ್ನು ಡೇಟಿಂಗ್ ಗೆ ಕರೆದೊಯ್ಯಲು ಅನುಮತಿ ಕೊಡಿ ಎಂದು ಪ್ಲೇಕಾರ್ಡ್ ಹಿಡಿದು ನಿಂತಿದ್ದು ಎಲ್ಲರ ಗಮನಸೆಳೆದಿದೆ. ಆದರೆ ಇಷ್ಟು ಚಿಕ್ಕ ಬಾಲಕ ಈ ರೀತಿ ಪ್ಲೇ ಕಾರ್ಡ್ ಬರೆಯಲು ಸಾಧ್ಯವೇ ಇಲ್ಲ. ಹೀಗಾಗಿ ಈತನ ಪೋಷಕರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಏನೂ ಅರಿಯದ ಮುಗ್ಧ ಬಾಲಕನ ಕೈಯಲ್ಲಿ ಈ ರೀತಿಯ ವಿಚಾರ ತುಂಬುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.