ಗಂಗೂಲಿ-ಕೊಹ್ಲಿ ವಾರ್: ಸೋಷಿಯಲ್ ಮೀಡಿಯಾದಲ್ಲಿ ಗಂಗೂಲಿ ಟಿಕ್ ಫಾರ್ ಟ್ಯಾಕ್!

ಮಂಗಳವಾರ, 18 ಏಪ್ರಿಲ್ 2023 (09:25 IST)
Photo Courtesy: Twitter
ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಸೌರವ್ ಗಂಗೂಲಿ ಮತ್ತು ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ನಡುವಿನ ಕೋಲ್ಡ್ ವಾರ್ ಮುಂದುವರಿದಿದೆ.

ಟೀಂ ಇಂಡಿಯಾ ನಾಯಕತ್ವ ಕಳೆದುಕೊಳ್ಳಲು ಆಗ ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಕಾರಣ ಎಂಬ ಸಿಟ್ಟು ಕೊಹ್ಲಿಯಲ್ಲಿದೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಮೊದಲು ಗಂಗೂಲಿಯತ್ತ ಕಿಡಿ ನೋಟ ಬೀರಿದ್ದರು. ಇದಾದ ಬಳಿಕ ಗಂಗೂಲಿ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡಿರಲಿಲ್ಲ.

ಈ ವಿಡಿಯೋಗಳ ವೈರಲ್ ಆದ ಬಳಿಕ ಕೊಹ್ಲಿ ಇನ್ ಸ್ಟಾಗ್ರಾಂ ಪುಟದಲ್ಲಿ ಗಂಗೂಲಿಯನ್ನು ಅನ್ ಫಾಲೋ ಮಾಡಿದ್ದರು. ಕೊಹ್ಲಿ ಅನ್ ಫಾಲೋ ಮಾಡಿದ ಬೆನ್ನಲ್ಲೇ ಈಗ ಗಂಗೂಲಿ ಕೂಡಾ ಟಿಕ್ ಫಾರ್ ಟ್ಯಾಕ್ ಎನ್ನುವಂತೆ ತಾನೂ ಕೊಹ್ಲಿಯನ್ನು ಅನ್ ಫಾಲೋ ಮಾಡಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಕಂಡ ಇಬ್ಬರು ದಿಗ್ಗಜ ಕ್ರಿಕೆಟಿಗರ ಶೀತಲ ಸಮರ ಮುಂದುವರಿದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ