ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಜಿಂಬಾಬ್ವೆ 123 ರನ್‌ಗೆ ಆಲೌಟ್
ಬುಧವಾರ, 15 ಜೂನ್ 2016 (15:33 IST)
ಜಿಂಬಾಬ್ವೆ ಮೂರನೇ ಏಕ ದಿನ ಪಂದ್ಯದಲ್ಲಿ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿ ಜಸ್‌ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 123 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಕ್ಲೀನ್ ಸ್ವೀಪ್ ಮಾಡುವ ಅವಕಾಶ ನೀಡಿದೆ.
ಜಿಂಬಾಬ್ವೆ ಕಡೆ ಸಿಬಾಂಡಾ ಮತ್ತು ಚಿಬಾಬಾ ಹೊರತುಪಡಿಸಿ ಬೇರಾವ ಆಟಗಾರರೂ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಪೆವಿಲಿಯನ್ ಮಾರ್ಚ್ ಫಾಸ್ಟ್ ಮಾಡಿದರು. ಒಂದು ಹಂತದಲ್ಲಿ ಜಿಂಬಾಬ್ವೆ 32.5 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು.
ಆದರೆ 9 ಓವರುಗಳಾಗುವಷ್ಟರಲ್ಲಿ ಇನ್ನುಳಿದ ಎಲ್ಲಾ ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿದೆ. ಟೀಂ ಇಂಡಿಯಾದಲ್ಲಿ ಈ ಬಾರಿ ಕರುಣ್ ನಾಯರ್ ಬದಲಿಗೆ ಫೈಜ್ ಫಜಲ್ ಅವರಿಗೆ ಅವಕಾಶ ನೀಡಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ