ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಮಾತ್ರ ಅನುಕೂಲವಾಗ್ತಿದೆ: ಆಸ್ಟ್ರೇಲಿಯಾ ಬಳಿಕ ಇಂಗ್ಲೆಂಡ್ ತಗಾದೆ

Krishnaveni K

ಬುಧವಾರ, 26 ಫೆಬ್ರವರಿ 2025 (10:29 IST)
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾಕ್ಕೆ ಮಾತ್ರ ಅನುಕೂಲವಾಗ್ತಿದೆ ಎಂದು ಆಸ್ಟ್ರೇಲಿಯಾ ಬಳಿಕ ಈಗ ಇಂಗ್ಲೆಂಡ್ ನಾಯಕ ತಗಾದೆ ತೆಗೆದಿದ್ದಾರೆ.

ಪಾಕಿಸ್ತಾನದ ಆತಿಥ್ಯದಲ್ಲಿ ಟೂರ್ನಮೆಂಟ್ ನಡೆಯುತ್ತಿದೆ. ಆದರೆ ಭಾರತ ಮಾತ್ರ ತನ್ನ ರಾಜಕೀಯ ಕಾರಣಗಳಿಂದ ಪಾಕಿಸ್ತಾನಕ್ಕೆ ತೆರಳಲು ಒಪ್ಪಿಲ್ಲ. ಉಳಿದೆಲ್ಲಾ ತಂಡಗಳು ಪಾಕಿಸ್ತಾನದ ಮೈದಾನಗಳಲ್ಲಿ ಪಂದ್ಯವಾಡಿದೆ. ಆದರೆ ಭಾರತ ಮಾತ್ರ ಒಂದೇ ಮೈದಾನದಲ್ಲಿ ಅಂದರೆ ದುಬೈನಲ್ಲೇ ಪಂದ್ಯವಾಡುತ್ತಿದೆ.

ಇದೀಗ ಭಾರತ ಸೆಮಿಫೈನಲ್ ಗೇರಿದ ಬೆನ್ನಲ್ಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಾಯಕರು ತಗಾದೆ ತೆಗೆದಿದ್ದಾರೆ. ಒಂದೇ ಮೈದಾನದಲ್ಲಿ ಆಡುತ್ತಿರುವುದರಿಂದ ಭಾರತಕ್ಕೆ ಮಾತ್ರ ಹೆಚ್ಚಿನ ಲಾಭವಾಗುತ್ತಿದೆ ಎಂದು ಮೊದಲು ಆಸೀಸ್ ನಾಯಕ ಪ್ಯಾಟ್ ಕುಮಿನ್ಸ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಕೂಡಾ ಅದೇ ವಿಚಾರ ಹೇಳಿದ್ದಾರೆ. ಇದೊಂದು ವಿಶೇಷ ಟೂರ್ನಮೆಂಟ್. ಇದುವರೆಗೆ ಕಾಣದಂತಹ ಟೂರ್ನಿ. ಯಾಕೆಂದರೆ ಇಲ್ಲಿ ಎಲ್ಲಾ ತಂಡಗಳೂ ಬೇರೆ ಬೇರೆ ಸ್ಥಳಗಳಲ್ಲಿ ಆಡುತ್ತಿದೆ, ಒಂದು ತಂಡವನ್ನು ಬಿಟ್ಟು ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ