Champion Trophy: ಕಿಂಗ್‌ ಕೊಹ್ಲಿ ಶತಕದೊಂದಿಗೆ ಪಾಕ್ ವಿರುದ್ಧ ಭಾರತಕ್ಕೆ ಅಮೋಘ ಜಯ

Sampriya

ಭಾನುವಾರ, 23 ಫೆಬ್ರವರಿ 2025 (22:01 IST)
Photo Courtesy X
ನವದೆಹಲಿ: ಪಾಕಿಸ್ತಾನ ವಿರುದ್ಧ ಇಂದು ನಡೆದ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಾಟದಲ್ಲಿ ಬದ್ಧವೈರಿ ವಿರುದ್ಧ ಭಾರತ 6 ರನ್‌ಗಳಿಂದ ಅಮೋಘ ಜಯ ಸಾಧಿಸಿದೆ.

ಟಾಸ್‌ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಗೊಂಡು ಭಾರತವನ್ನು ಫೀಲ್ಡಿಂಗ್‌ಗೆ ಆಹ್ವಾನಿಸಿತು. 49.4ಓವರ್‌ಗಳಲ್ಲಿ 241 ರನ್‌ ಗಳಿಸಿ ಪಾಕ್‌ ಪಡೆ ಆಲ್‌ ಔಟ್ ಆಯಿತು.  ಪಾಕ್ ನೀಡಿದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, 42.3ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 244 ರನ್ ಗಳಿಸಿತು. ಈ ಮೂಲಕ ಭಾರತ ಅಮೋಘ ಜಯವನ್ನು ಸಾಧಿಸಿದರೆ, ಪಾಕಿಸ್ತಾನ ಚಾಂಪಿಯನ್ ಟ್ರೋಪಿಯಿಂದ ನಿರ್ಗಮಿಸಿತು.

ಆರಂಭಿಕ ಬ್ಯಾಟರ್‌ಗಳಾಗಿ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಅವರು ಜತೆಯಾಟ ಶುರು ಮಾಡಿದರು.  ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಅನ್ನು ತ್ವರಿತವಾಗಿ ಕಳೆದುಕೊಂಡರು. ಆದರೆ ವಿರಾಟ್ ಕೊಹ್ಲಿ ಸೆಂಚುರಿಯೊಂದಿಗೆ ಪಾಕ್‌ ನೀಡಿದ ಗುರಿಯನ್ನು ಮುಗಿಸಿದರು.

ಇನ್ನೂ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಜಯ ಸಾಧಿಸುತ್ತಿದ್ದ ಹಾಗೇ ದೇಶದಾದ್ಯಂತ ಕ್ರಿಕೆಟ್‌ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ