Champions Trophy 2025: ಅಫ್ಘಾನಿಸ್ತಾನ ಫೈನಲ್ ಗೇರಿದರೆ ಟೀಂ ಇಂಡಿಯಾ ಹಾದಿ ಸುಗಮ

Krishnaveni K

ಗುರುವಾರ, 27 ಫೆಬ್ರವರಿ 2025 (14:20 IST)
ದುಬೈ: ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಅಫ್ಘಾನಿಸ್ತಾನ ಈಗ ಸೆಮಿಫೈನಲ್ ಗೇರುವ ಅವಕಾಶ ಜೀವಂತವಾಗಿರಿಸಿದೆ. ಒಂದು ವೇಳೆ ಅಫ್ಘಾನಿಸ್ತಾನ ಸೆಮಿಫೈನಲ್ ಗೇರಿದರೆ ಟೀಂ ಇಂಡಿಯಾ ಹಾದಿ ಸುಗಮವಾಗಲಿದೆ.

ಏಕದಿನ ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಅಫ್ಘಾನಿಸ್ತಾನ ನಿನ್ನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದಷ್ಟೇ ಅಲ್ಲ, ಆಂಗ್ಲರ ಪಡೆಯ ಸೆಮಿಫೈನಲ್ ಹಾದಿಯನ್ನು ಬಂದ್ ಮಾಡಿದೆ.

ಇದೀಗ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕಾಗಿ ಆಸ್ಟ್ರೇಲಿಯಾ, ದ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ಪೈಪೋಟಿ ನಡೆಯಲಿದೆ. ನಾಳೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಸೆಮಿಫೈನಲ್ ಗೆ ಎಂಟ್ರಿ ಪಡೆಯಲಿದೆ.

ಅಫ್ಘಾನಿಸ್ತಾನ ಸೆಮಿಫೈನಲ್ ಗೇರಿದರೆ ಬಹುತೇಕ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಎದುರಾಳಿಯಾಗಬಹುದು. ಐಸಿಸಿ ಕೂಟಗಳಲ್ಲಿ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಅಪರೂಪಕ್ಕೆ ಒಮ್ಮೆ ಮಾತ್ರ ಗೆಲುವು ಕಂಡಿದೆ. ಹೀಗಾಗಿ ಅಫ್ಘಾನಿಸ್ತಾನವೇ ಸೆಮಿಫೈನಲ್ ನಲ್ಲಿ ಎದುರಾಳಿಯಾದರೆ ಭಾರತಕ್ಕೆ ಮಾನಸಿಕವಾಗಿಯೂ ಮೇಲುಗೈ ಸಿಕ್ಕಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ