ಟೀಂ ಇಂಡಿಯಾಗೆ ಶಾಕ್: ರೋಹಿತ್ ಶರ್ಮಾ ನ್ಯೂಜಿಲೆಂಡ್ ಪಂದ್ಯಕ್ಕೆ ಡೌಟ್

Krishnaveni K

ಗುರುವಾರ, 27 ಫೆಬ್ರವರಿ 2025 (10:03 IST)
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಕ್ಕೆ ದೊಡ್ಡ ಶಾಕ್ ಕಾದಿದೆ. ರೋಹಿತ್ ಶರ್ಮಾ ಈ ಪಂದ್ಯಕ್ಕೆ ಅನುಮಾನ ಎನ್ನಲಾಗಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಈಗಾಗಲೇ ಸತತ ಎರಡು ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಕೊನೆಯ ಪಂದ್ಯದ ಫಲಿತಾಂಶದ ಮೇಲೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಯಾವ ಸ್ಥಾನ ಪಡೆಯಲಿದೆ ಎಂದು ಗೊತ್ತಾಗಲಿದೆ.

ಆದರೆ ಟೀಂ ಇಂಡಿಯಾಗೆ ಈಗ ಗಾಯದ ಚಿಂತೆ ಶುರುವಾಗಿದೆ. ನಾಯಕ ರೋಹಿತ್ ಶರ್ಮಾ ಕಳೆದ ಪಂದ್ಯದ ವೇಳೆಯೇ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಆದರೆ ಅದು ದೊಡ್ಡ ಸಮಸ್ಯೆಯೇನೂ ಅಲ್ಲ ಎಂದು ಪಂದ್ಯದ ಬಳಿಕ ಹೇಳಿದ್ದರು. ಇದೀಗ ನೆಟ್ಸ್ ಪ್ರಾಕ್ಟೀಸ್ ನಲ್ಲೂ ಅವರು ಅಷ್ಟೊಂದು ಸಕ್ರಿಯವಾಗಿ ಭಾಗಿಯಾಗಿರಲಿಲ್ಲ. ಹೀಗಾಗಿ ರೋಹಿತ್ ಕೊನೆಯ ಲೀಗ್ ಪಂದ್ಯಕ್ಕೆ ಅನುಮಾನ ಎನ್ನಲಾಗುತ್ತಿದೆ.

ಇನ್ನು, ವಿರಾಟ್ ಕೊಹ್ಲಿ ಕೂಡಾ ಪಾದದ ನೋವಿಗೊಳಗಾಗಿದ್ದರು. ಅಭ್ಯಾಸದ ಬಳಿಕ ಐಸ್ ಪ್ಯಾಕ್ ಕಟ್ಟಿಕೊಳ್ಳುತ್ತಿದ್ದರು. ವೇಗಿ ಮೊಹಮ್ಮದ್ ಶಮಿ ಕೂಡಾ ಪದೇ ಪದೇ ಕಾಲುನೋವಿಗೊಳಗಾಗುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಈಗ ಗಾಯಾಳುಗಳ ಕ್ಯಾಂಪ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ