Champions Trophy: ಟೀಂ ಇಂಡಿಯಾ, ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

Krishnaveni K

ಶನಿವಾರ, 8 ಮಾರ್ಚ್ 2025 (17:43 IST)
ದುಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಾಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯ ಎಲ್ಲಿ, ಹೇಗೆ ವೀಕ್ಷಿಸಬೇಕು ಇಲ್ಲಿದೆ ವಿವರ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಂತ ಯಶಸ್ವೀ ತಂಡಗಳಲ್ಲಿ ಒಂದಾಗಿದೆ. ಇದುವರೆಗೆ ಟೀಂ ಇಂಡಿಯಾ ನಾಲ್ಕು ಬಾರಿ ಫೈನಲ್ ತಲುಪಿತ್ತು. ಈ ಪೈಕಿ ಎರಡು ಬಾರಿ ಚಾಂಪಿಯನ್ ಆಗಿತ್ತು ಎನ್ನುವುದು ವಿಶೇಷ.

2002 ರಲ್ಲಿ ಶ್ರೀಲಂಕಾ ಜೊತೆಗೆ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ಗೇರಿತ್ತು. ಆದರೆ ಅಂದು ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರಿಂದ ಜಂಟಿ ವಿಜೇತರಾಗಿ ಹೊರಹೊಮ್ಮಿತ್ತು. ಇದಾದ ಬಳಿಕ ಧೋನಿ ನಾಯಕತ್ವದಲ್ಲಿ 2013 ರಲ್ಲಿ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಚಾಂಪಿಯನ್ ಆಗಿತ್ತು.

ಇದೀಗ ಐದನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವತ್ತ ಗುರಿ ಹಾಕಿಕೊಂಡಿದೆ. ಈ ಬಾರಿಯೂ ಟೀಂ ಇಂಡಿಯಾ ಗೆಲ್ಲುವ ಫೇವರಿಟ್ ಆಗಿದೆ. ಇದುವರೆಗೆ ಲೀಗ್ ಪಂದ್ಯ, ಸೆಮಿಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳಲ್ಲೂ ಸೋಲಿಲ್ಲದ ಸರದಾರನಂತೆ ರೋಹಿತ್ ಪಡೆ ಫೈನಲ್ ಪ್ರವೇಶಿಸಿದೆ. ಜೊತೆಗೆ ದುಬೈನಲ್ಲಿ ನಿಧಾನಗತಿಯ ಪಿಚ್, ಸ್ಪಿನ್ ಗೆ ಸಹಕರಿಸುವ ವಾತಾವರಣವಿರುವುದು ಟೀಂ ಇಂಡಿಯಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಯಾವುದೇ ಬದಲಾವಣೆಗಳಿಲ್ಲದೇ ಕಣಕ್ಕಿಳಿಯುವುದು ನಿಶ್ಚಿತ. ಲೀಗ್ ಪಂದ್ಯಗಳಂತೇ ಈ ಪಂದ್ಯವೂ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ಆಪ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ