ಐದನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ರೆಡಿಯಾಗಿಲ್ಲ ಚೆನ್ನೈ ಸ್ಟೇಡಿಯಂ!

ಗುರುವಾರ, 15 ಡಿಸೆಂಬರ್ 2016 (10:13 IST)
ಚೆನ್ನೈ: ವಾರ್ಧಾ ಚಂಡಮಾರುತಕ್ಕೆ ಸಿಲುಕಿ ಚೆನ್ನೈನ ಚಿಪಾಕ್ ಸ್ಟೇಡಿಯಂ ಹಾನಿಗೀಡಾಗಿದೆ. ನಾಳೆಯಿಂದ ಇಂಗ್ಲೆಂಡ್ ಮತ್ತು ಭಾರತ ನಡುವೆ ಇಲ್ಲಿ ಐದನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇದಕ್ಕಾಗಿ ಈಗ ಮೈದಾನವನ್ನು ಸಜ್ಜುಗೊಳಿಸಲಾಗುತ್ತಿದೆ.

ಅಭ್ಯಾಸ ನಡೆಸುವ ಸ್ಥಳ ಸಂಪೂರ್ಣ ಹಾನಿಗೀಡಾಗಿದ್ದರಿಂದ ಉಭಯ ತಂಡಗಳು ಅಭ್ಯಾಸ ರದ್ದುಗೊಳಿಸಿದ್ದವು. ಆದರೆ ಇಂದು ಉಭಯ ತಂಡಗಳು ಪಂದ್ಯ ಆರಂಭಕ್ಕೆ ಮುನ್ನ ಇಂದು ಒಮ್ಮೆ ಅಭ್ಯಾಸ ನಡೆಸಲಿವೆ.

ಇದಲ್ಲದೆ ಮೈದಾನದ ಒಳಗಿರುವ ಸೈಟ್ ಸ್ಕ್ರೀನ್ ಧರಾಶಾಯಿಯಾಗಿತ್ತು. ಹೀಗಾಗಿ ಹೊಸದಾಗಿ ಸೈಟ್ ಸ್ಕ್ರೀನ್ ಅಳವಡಿಸಲಾಗಿದೆ. ಸದ್ಯ ತ್ವರಿತ ಗತಿಯಲ್ಲಿ ನಾಳಿನ ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಮಿಕರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ