ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್
37 ವರ್ಷದ ಆ್ಯಂಡ್ರೆ ರಸೆಲ್ ಸಬೀನಾ ಪಾರ್ಕ್ ನಲ್ಲಿ ನಡೆಯಲಿರುವ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ತಮ್ಮ ದೇಶದ ಪರ ಕಣಕ್ಕಿಳಿಯಲಿದ್ದಾರೆ. ಇದು ಅವರ ತವರು ಮೈದಾನವಾಗಿದ್ದು ಇಲ್ಲಿಯೇ ವಿದಾಯ ಪಂದ್ಯವಾಡಲು ತೀರ್ಮಾನಿಸಿದ್ದಾರೆ.
2011 ರಲ್ಲಿ ಪಾಕಿಸ್ತಾನ್ ವಿರುದ್ಧ ರಸೆಲ್ ಮೊದಲ ಬಾರಿಗೆ ಟಿ20 ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೆ 84 ಟಿ20, 56 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನಾಡಿದ್ದಾರೆ.
ವಿಶೇಷವಾಗಿ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರರಾಗಿದ್ದರು. ಟಿ20 ಕ್ರಿಕೆಟ್ ನಲ್ಲಿ ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು. ಇದೀಗ 14 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಲು ತೀರ್ಮಾನಿಸಿದ್ದಾರೆ.