IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಿನ್ನೆಯಿಂದ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ವೇಗಿ ಅರ್ಷ್ ದೀಪ್ ಸಿಂಗ್ ಕೈಗೆ ಬ್ಯಾಂಡೇಜ್ ಮಾಡಿಕೊಂಡಿರುವುದು ಕಂಡುಬಂದಿದೆ. ಅವರ ಎಡಗೈಗೆ ಗಾಯವಾಗಿರುವುದು ತಿಳಿದುಬಂದಿದೆ.
ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುವುದು ಎಂಬ ಸುದ್ದಿಗಳಿತ್ತು. ಅವರ ಸ್ಥಾನದಲ್ಲಿ ಅರ್ಷ್ ದೀಪ್ ಸಿಂಗ್ ಗೆ ಅವಕಾಶ ನೀಡುವ ಸಾಧ್ಯತೆಗಳಿತ್ತು. ಆದರೆ ಸದ್ಯಕ್ಕೆ ಅರ್ಷ್ ದೀಪ್ ಕೈಯಲ್ಲಿರುವ ಬ್ಯಾಂಡೇಜ್ ನೋಡಿದರೆ ಅವರು ಆಡುವ ಸಾಧ್ಯತೆಯಿಲ್ಲ.
ಹೀಗಾದಲ್ಲಿ ಬುಮ್ರಾ ಅನಿವಾರ್ಯವಾಗಿ ನಾಲ್ಕನೇ ಟೆಸ್ಟ್ ಪಂದ್ಯ ಆಡಬೇಕಾಗುತ್ತದೆ. ಪ್ರಸಿದ್ಧ ಕೃಷ್ಣ ಫಾರ್ಮ್ ನಲ್ಲಿಲ್ಲದೇ ಇರುವುದು ತಂಡಕ್ಕೆ ಮತ್ತೊಂದು ಹೊಡೆತವಾಗಿದೆ. ಇದೀಗ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಂ ಇಂಡಿಯಾರನ್ನು ಬುಮ್ರಾರನ್ನು ಕಣಕ್ಕಿಳಿಸುವುದು ಬಹತೇಕ ಖಚಿತ ಎನ್ನಬಹುದು.