ಮೈದಾನದಲ್ಲಿ ಕೂದಲೆಳೆಯಲ್ಲಿ ಎರಡು ಬಾರಿ ಅಪಾಯದಿಂದ ಪಾರಾದ ಚೇತೇಶ್ವರ ಪೂಜಾರ!

ಸೋಮವಾರ, 20 ಆಗಸ್ಟ್ 2018 (18:00 IST)
ಟ್ರೆಂಟ್ ಬ್ರಿಡ್ಜ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೂರನೇ ದಿನದ ಊಟದ ವಿರಾಮದ ವೇಳೆಗೆ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸಿದೆ.

ಭೋಜನ ವಿರಾಮದ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದ್ದು ಒಟ್ಟಾರೆ 362 ರನ್ ಗಳ ಮುನ್ನಡೆ ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ 54 ಮತ್ತು ಚೇತೇಶ್ವರ ಪೂಜಾರ 56 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಎಲ್ಲಕ್ಕಿಂತ ಹೆಚ್ಚು ಚೇತೇಶ್ವರ ಪೂಜಾರ ಯಾವತ್ತೋ ಔಟಾಗಬೇಕಿದ್ದವರು. ಆದರೆ ಎರಡೆರಡು ಬಾರಿ ಜೀವದಾನ ಪಡೆದು ಬಚಾವ್ ಆಗಿದ್ದಾರೆ. ಒಮ್ಮೆ ದಿನದ ಆರಂಭದಲ್ಲಿಯೇ ಜೇಮ್ಸ್ ಆಂಡರ್ಸನ್ ಬೌಲಿಂಗ್ ನಲ್ಲಿ. ನಂತರ ಮತ್ತೊಮ್ಮೆ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಕ್ಯಾಚ್ ಡ್ರಾಪ್ ಆಗಿ ಬಚಾವ್ ಆಗಿದ್ದಾರೆ.

ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿಯೂ ಅರ್ಧಶತಕ ಗಳಿಸಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ಎರಡೂ ಇನಿಂಗ್ಸ್ ಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ 50 ಪ್ಲಸ್ ರನ್ ಪೇರಿಸಿದ ಮೂರನೇ ನಾಯಕ ಎಂಬ ಗೌರವಕ್ಕೆ ಕೊಹ್ಲಿ ಪಾತ್ರರಾದರು. ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ 97 ಕ್ಕೆ ಔಟಾಗಿದ್ದರು. ಕೊಹ್ಲಿಗೆ ಮೊದಲು ಅಲನ್ ಬಾರ್ಡರ್ ಮತ್ತು ಗ್ರೇಮ್ ಸ್ಮಿತ್ ಈ ಸಾಧನೆ ಮಾಡಿದ್ದರು. ಈ ದಿನ ಊಟದ ವಿರಾಮದವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಇರುವುದು ಭಾರತೀಯ ಬ್ಯಾಟ್ಸ್ ಮನ್ ಗಳ ಸಾಧನೆಯೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ