ಕಳಪೆಯಾಗಿದ್ದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಇದ್ದಕ್ಕಿದ್ದಂತೆ ಕ್ಲಿಕ್ ಆಗಿದ್ದು ಹೇಗೆ? ಸಚಿನ್ ಹೇಳಿದ ಸೀಕ್ರೆಟ್!

ಸೋಮವಾರ, 20 ಆಗಸ್ಟ್ 2018 (09:08 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಆಡಿದ ಟೀಂ ಇಂಡಿಯಾಕ್ಕೂ ಮೂರನೇ ಪಂದ್ಯವಾಡಿದ ತಂಡಕ್ಕೂ ಅಜಗಜಾಂತರ ವ್ಯತ್ಯಾಸವಿದ್ದಂತೆ ತೋರಿತ್ತು.

ಅಷ್ಟಕ್ಕೂ ಪಾತಾಳ ಸೇರಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಇದ್ದಕ್ಕಿದ್ದಂತೆ ಕ್ಲಿಕ್ ಆಗಿದ್ದು ಹೇಗೆ? ಇದಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಾರಣ ಪತ್ತೆ ಮಾಡಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಸ್ವಲ್ಪವೂ ಯೋಜನೆಯಿಲ್ಲದವರಂತೆ ಆಡಿ ವಿಕೆಟ್ ಒಪ್ಪಿಸಿದ್ದರು. ಆದರೆ   ಈ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಗಳಲ್ಲಿ ಆಡುವ ತುಡಿತ ಕಾಣುತ್ತಿತ್ತು. ಹಾಗೆಯೇ ಬ್ಯಾಟ್ಸ್ ಮನ್ ಗಳ ಫ್ರಂಟ್ ಫೂಟ್ ಚಲನೆ ಸುಧಾರಣೆಯಾಗಿದೆ. ಇದೇ ಕಾರಣಕ್ಕೆ ಬ್ಯಾಟ್ಸ್ ಮನ್ ಗಳು ಯಶಸ್ಸು ಕಂಡಿದ್ದಾರೆ. ಇದೇ ತುಡಿತ, ಉತ್ಸಾಹ ಮುಂದುವರಿದರೆ ಮುಂದಿನ ದಿನಗಳಲ್ಲೂ ಯಶಸ್ಸು ಸಾಧ್ಯ ಎಂದು ಸಚಿನ್ ವಿಶ್ಲೇಷಿಸಿದ್ದಾರೆ. ಕ್ರಿಕೆಟ್ ದೇವರು ಹೇಳಿದ ಮೇಲೆ ಒಪ್ಪಲೇಬೇಕಲ್ಲವೇ?!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ