ಚೀನಾದ ತಾಯ್ ಯಿಂಗ್ ವಿರುದ್ಧ ಆಡಲು ಸೈನಾ ನೆಹ್ವಾಲ್‌ಗೆ ಭಯ

ಬುಧವಾರ, 15 ಜೂನ್ 2016 (14:26 IST)
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಇತ್ತೀಚೆಗೆ ಎರಡನೇ ಆಸ್ಟ್ರೇಲಿಯ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಚೀನಾದ ಟೈಪೈನ ತಾಯ್ ಜು ಯಿಂಗ್ ರಿಯೊ ಒಲಿಂಪಿಕ್ಸ್‌ನಲ್ಲಿ ತಮಗೆ ಪ್ರಬಲ ಎದುರಾಳಿ ಎಂದು ನಂಬಿದ್ದಾರೆ.

ತೈವಾನ್‌ನ ಟಾಪ್ ಬ್ಯಾಡ್ಮಿಂಟನ್ ಆಟಗಾರ್ತಿ  ತಾಯ್ ಯಿಂಗ್ 2016ರ ಇಂಡೊನೇಶಿಯಾ ಓಪನ್ ಸೂಪರ್ ಸೀರೀಸ್ ಪ್ರೀಮಿಯರ್‌ನಲ್ಲಿ ಚೀನಾದ ಮಾಜಿ ಒಂದನೇ ನಂಬರ್ ಆಟಗಾರ್ತಿ ವ್ಯಾಂಗ್ ಇಹಾನ್ ಅವರನ್ನು ಸೋಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಬಳಿಕ ಬೆಳಕಿಗೆ ಬಂದಿದ್ದರು. 

ತಾಯ್ ತುಂಬಾ ಪ್ರಬಲ ಆಟಗಾರ್ತಿ. ಅವರು ಟಾಪ್ ಆಟಗಾರ್ತಿಯರನ್ನು ಸೋಲಿಸಿ ಇಂಡೊನೇಶಿಯಾ ಓಪನ್ ಕೂಡ ಗೆದ್ದಿದ್ದಾರೆ. ಅವರು ತಾಂತ್ರಿಕವಾಗಿ ಪ್ರಬಲ ಆಟಗಾರ್ತಿಯಾಗಿದ್ದು, ಅವರ ಕಠಿಣ ಶಾಟ್‌ಗಳನ್ನು ಸ್ವೀಕರಿಸುವುದು ಕಷ್ಟವಾಗಿರುತ್ತದೆ ಎಂದು ಸಾನಿಯಾ ಮಾಧ್ಯಮಕ್ಕೆ ತಿಳಿಸಿದರು. 
 
ತಾಯ್ ಅವರನ್ನು ಸೋಲಿಸಲು ತಾವು ಉತ್ತಮ ಕಾರ್ಯತಂತ್ರ ಹೊಂದಿರಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು. 
ಆಗಸ್ಟ್ 5ರಿಂದ ರಿಯೊ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಬ್ಯಾಡ್ಮಿಂಟನ್ ಆಟಗಾರ್ತಿಯಲ್ಲಿ ಸೈನಾ ಒಬ್ಬರಾಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ