ಮತ್ತೆ ಚಿನ್ನಸ್ವಾಮಿಗೆ ಬಂದಾಗ ನೋಡ್ಕೋತೀವಿ! ಗಂಭೀರ್ ಗೆ ಎಚ್ಚರಿಕೆ
ಕೊನೆಯ ಓವರ್ ನಲ್ಲಿ ಎಲ್ಲರೂ ಆರ್ ಸಿಬಿ ಹೆಸರೆತ್ತಿ ಕರೆದು ಚಿಯರ್ ಮಾಡುತ್ತಿದ್ದರು. ಹೀಗಾಗಿ ಪಂದ್ಯದ ಬಳಿಕ ಗಂಭೀರ್ ಪ್ರೇಕ್ಷಕರ ಕಡೆಗೆ ತಿರುಗಿ ಸುಮ್ಮನಿರುವಂತೆ ಬಾಯಿಗೆ ಬೆರಳಿಟ್ಟು ಸನ್ನೆ ಮಾಡಿ ಅಗ್ರೆಷನ್ ತೋರಿದ್ದರು.
ಅವರ ವರ್ತನೆ ಆರ್ ಸಿಬಿ ಪ್ರೇಕ್ಷಕರನ್ನು ಕೆರಳಸಿದೆ. ನಮ್ಮ ತವರಿಗೆ ಬಂದು ಹೀಗೆ ಧಮ್ಕಿ ಹಾಕಿದರೆ ನಾವು ಸುಮ್ಮನಿರಲ್ಲ. ಮುಂದಿನ ಸಲ ಬಂದಾಗ ಇದಕ್ಕೆ ತಕ್ಕ ಉತ್ತರ ಕೊಡ್ತೀವಿ. ಆರ್ ಸಿಬಿ ತಂಡ ಸುಮ್ಮನಿರಬಹುದು. ಆದರೆ ನಾವು ಸುಮ್ಮನಿರಲ್ಲ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ಕೊಟ್ಟಿದ್ದಾರೆ.