ವೆಸ್ಟ್ ಇಂಡೀಸ್ ತಂಡದಿಂದ ಕ್ರಿಸ್ ಗೇಲ್, ಡೆರೆನ್ ಸಾಮಿ, ಬ್ರೇವೊಗೆ ಕೊಕ್
ಶುಕ್ರವಾರ, 20 ಮೇ 2016 (11:41 IST)
ಕ್ರಿಸ್ ಗೇಲ್, ಡ್ಯಾರೆನ್ ಸಾಮಿ ಮತ್ತು ಡ್ವಾನ್ ಬ್ರೇವೊ ಅವರನ್ನು ತ್ರಿರಾಷ್ಟ್ರಗಳ ಏಕ ದಿನ ಸರಣಿಯಲ್ಲಿ ಆಡುವ ವೆಸ್ಟ್ ಇಂಡೀಸ್ ತಂಡಕ್ಕೆ ಕೈಬಿಡಲಾಗಿದೆ. ಟಿ20 ಪಂದ್ಯ ವಿಜೇತ ಕಾರ್ಲೊಸ್ ಬ್ರಾತ್‌ವೈಟ್ ಅವರನ್ನು ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.
2015ರ ನವೆಂಬರ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರದ ಆಫ್ ಸ್ಪಿನ್ನರ್ ಸುನಿಲ್ ನಾರಾಯಣ್ ಮತ್ತು ಆಲ್ ರೌಂಡರ್ ಕೀರನ್ ಪೋಲಾರ್ಡ್ ಅವರನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 3ರಿಂದ ಆರಂಭವಾಗುವ 14 ಆಟಗಾರರ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ವಿಶ್ವ ಟಿ 20 ಜಯದಲ್ಲಿ ಮುಖ್ಯಪಾತ್ರವಹಿಸಿದ ಬ್ರಾತ್‌ವೈಟ್ ಮತ್ತು ಸ್ಯಾಮ್ಯುಯಲ್ಸ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಆದರೆ ತಂಡದಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಆಲ್ ರೌಂಡರ್ ಆಂಡ್ರೆ ರಸೆಲ್ , ಸಾಮಿ, ಬ್ರೇವೊ ಮತ್ತು ಗೇಲ್ ಅವರನ್ನು ಸೇರ್ಪಡೆ ಮಾಡಿಲ್ಲ.
ಹಗಲು/ರಾತ್ರಿ ಸರಣಿಯು ಜೂನ್ 3ರಿಂದ 7ರವರೆಗೆ ಗಯಾನ ರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾಗಿ ಬಳಿಕ ವಾರ್ನರ್ ಪಾರ್ಕ್, ಸೇಂಟ್ ಕಿಟ್ಸ್‌ನಲ್ಲಿ(ಜೂನ್ 11-15) ನಡೆಯುತ್ತದೆ ಮತ್ತು ಬಾರ್ಬಡೋಸ್ ಕೆನ್ಸಿಂಗ್ ಟನ್ ಓವಲ್‌ನಲ್ಲಿ ಜೂನ್ 19-26ರವರೆಗೆ ಆಡಿಸಲಾಗುತ್ತದೆ. ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.