ಮಲ್ಯ ಗೋವಾ ಮ್ಯಾನ್ಷನ್‌ನಲ್ಲಿ 5 ದಿನಗಳನ್ನು ಕಳೆದ ಕ್ರಿಸ್ ಗೇಲ್

ಮಂಗಳವಾರ, 14 ಜೂನ್ 2016 (18:48 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿದ ಬಳಿಕ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮಾಲೀಕ ವಿಜಯ್ ಮಲ್ಯ ಅವರ ಕಡಲತೀರದ ಗೋವಾ ಮ್ಯಾನ್ಷನ್‌ನಲ್ಲಿ 5 ದಿನಗಳನ್ನು ''ಕಿಂಗ್ ಆಫ್ ವಿಲ್ಲಾ ''ರೀತಿಯಲ್ಲಿ ಕಳೆದರು ಮತ್ತು ಮಲ್ಯ ಅವರ ಮೂರು ಚಕ್ರಗಳ ಹಾರ್ಲಿ ಡೇವಿಡ್‌ಸನ್‌ ರೈಡ್ ಮಾಡಿ ಆನಂದಿಸಿದರು. ಗೇಲ್ ತಮ್ಮ ಆತ್ಮಚರಿತ್ರೆ ಐ ಡೋಂಟ್ ಲೈಕ್ ಕ್ರಿಕೆಟ್, ಐ ಲವ್ ಇಟ್‌ನಲ್ಲಿ ಇವನ್ನು ಬರೆದುಕೊಂಡಿದ್ದಾರೆ. 
 
ಟೀಮ್ ಮ್ಯಾನೇಜರ್ ಜಾರ್ಜ್ ಅವಿನಾಶ್ ಅವರಿಂದ ಗೇಲ್ ಮಲ್ಯ ಅವರ ವಿಲ್ಲಾ ಕುರಿತು ಕೇಳಿದ್ದರು. ಆಕಸ್ಮಿಕವಾಗಿ ಎರಡು ಪಂದ್ಯಗಳ ನಡುವೆ 5 ದಿನಗಳ ವಿರಾಮವಿದ್ದಿದ್ದರಿಂದ ಬೇರೆ ಆಟಗಾರರು ಬರದಿದ್ದರೂ ಏಕಾಂಗಿಯಾಗಿ ಗೇಲ್ ಅಲ್ಲಿಗೆ ಹೋಗುವ ಆಸಕ್ತಿ ತೋರಿದರು. 
 
ತಾನು ಅಲ್ಲಿಗೆ ತೆರಳಿದಾಗ ಅದು ಬಹುತೇಕ ಹೊಟೆಲ್‌ಗಳಿಂದ ದೊಡ್ಡದಾಗಿತ್ತು. ನಾನು ನೋಡಿದ ಯಾವುದೇ ಮನೆಗಿಂತ ತಂಪಾಗಿತ್ತು ಎಂದು ಗೇಲ್ ಬರೆದಿದ್ದಾರೆ. ಇದು ಜೇಮ್ಸ್ ಬಾಂಡ್, ಪ್ಲೇಬಾಯ್ ಮ್ಯಾನ್ಷನ್, ಬಿಳಿಯ ಕಾಂಕ್ರೀಟ್ ಮತ್ತು ಗ್ಲಾಸ್‌ನಿಂದ ಕೂಡಿದ ವಿಶಾಲವಾದ ಮ್ಯಾನ್ಶನ್  ಎಂದು ಗೇಲ್ ಬರೆದಿದ್ದಾರೆ.
 
ಇಡೀ ವಿಲ್ಲಾದಲ್ಲಿ ನಾನು ಅಡ್ಡಾಡಿದೆ. ಹೋದ ಕಡೆಯಲ್ಲೆಲ್ಲಾ ಇಬ್ಬರು ಬಟ್ಲರ್‌ಗಳು ಜತೆಗೂಡಿದರು. ನಾನು ರಾಜನಂತೆ ಏಕಾಂಗಿಯಾಗಿ ಈಜುಕೊಳದಲ್ಲಿ ಈಜಿದೆ. ಲಾನ್‌ನಲ್ಲಿ ಅಡ್ಡಾಡಿದೆ. ಕಿಂಗ್ ಫಿಷರ್ ಬಿಯರ್‌ನೊಂದಿಗೆ ಮತ್ತೆ ಈಜುಕೊಳದಲ್ಲಿ ಇಳಿದೆ. ಕಿಂಗ್‌ಫಿಷರ್ ಬಿಯರ್‌ಗಳನ್ನು ಮತ್ತಷ್ಟು ತಂದುಕೊಟ್ಟರು. ಕಿಂಗ್‌ಫಿಷರ್ ವಿಲ್ಲಾದಲ್ಲಿ ಮಾತ್ರ ಕಿಂಗ್‌ಫಿಷರ್ ಬಿಯರ್ ಪೂರೈಕೆ ನಿಲ್ಲುವುದಿಲ್ಲ ಎಂದು ಗೇಲ್ ಬಣ್ಣಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ