ಅಮೆರಿಕದಲ್ಲಿ ವಿರಾಟ್ ವರ್ಸಸ್ ಧೋನಿಯ ನಡುವೆ ಕ್ರಿಕೆಟ್ ಸಮರ

ಶನಿವಾರ, 28 ಮೇ 2016 (18:41 IST)
ನವದೆಹಲಿ:  ವಿರಾಟ್ ಕೊಹ್ಲಿ ಟೆಸ್ಟ್ ನಾಯಕ, ಮಹೇಂದ್ರ ಸಿಂಗ್ ಧೋನಿ ಕಿರು ಓವರುಗಳ ನಾಯಕ. ಇವರಿಬ್ಬರು ಪರಸ್ಪರ ಎದುರುಬದುರಾಗಿ ಆಡುವುದಕ್ಕೆ ಸಾಧ್ಯವೇ, ಸಾಧ್ಯವಿದೆ. ಅಮೆರಿಕದಲ್ಲಿ  ಕೊಹ್ಲಿಯ ಆರ್‌ಸಿಬಿ ಮತ್ತು ಧೋನಿ ಸಾರಥ್ಯದ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ನಡುವೆ ಪ್ರದರ್ಶನ ಪಂದ್ಯಗಳನ್ನು ನಡೆಯುವಾಗ ಇವರಿಬ್ಬರು ಪರಸ್ಪರ ಎದುರು ಬದುರು ಆಡುವ ಸಂಭವವಿದೆ.
ಮುಂಬೈ ಇಂಡಿಯನ್ಸ್, ಆರ್‌ಸಿಬಿ ಮತ್ತು ರೈಸಿಂಗ್ ಪುಣೆ ಅಮೆರಿಕದಲ್ಲಿ ಕೆಲವು ಪ್ರದರ್ಶನ ಪಂದ್ಯಗಳನ್ನು ಆಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ. ಅಮೆರಿಕದಲ್ಲಿ ಭಾರತೀಯ ಮತ್ತು ದಕ್ಷಿಣ ಏಷ್ಯನ್ನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ವಿಷಯವನ್ನು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಆಡುವ ಸ್ಥಳ ತಾತ್ಕಾಲಿಕವಾಗಿ ಹೌಸ್ಟನ್ ಎಂದು ಬಿಸಿಸಿಐ ಹಿರಿಯ ಅಧಿಕಾರಿ ತಿಳಿಸಿದರು. 
 
 ಈ ಪಂದ್ಯಗಳನ್ನು ಬಹುಶಃ ಸೆಪ್ಟೆಂಬರ್‌ನಲ್ಲಿ ಆಯೋಜಿಸಲಾಗುತ್ತದೆ. ಎಲ್ಲಾ ಮೂರು ತಂಡಗಳು ಪರಸ್ಪರ ಆಡಲಿದ್ದು, ಕೊಹ್ಲಿ ಮತ್ತು ಧೋನಿ ಪ್ರಮುಖ ಆಕರ್ಷಣೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದರು.  ಬಿಸಿಸಿಐ ಅಧಿಕಾರಿಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಕ್ರಿಕೆಟ್ ಹೇಗೆ ಚಲಾವಣೆಯಾಗುತ್ತದೆಂದು ನೋಡುವುದಕ್ಕೆ ಒಂದು ಅವಕಾಶವಾಗಿದೆ.

 ಅಮೆರಿಕದಲ್ಲಿ ಟಿ 20 ಪಂದ್ಯವನ್ನು ಮಾತ್ರ ಮಾರ್ಕೆಟಿಂಗ್ ಮಾಡಬಹುದಾಗಿದೆ. ಮುಂದಿನ ವರ್ಷ ಮಿನಿ ಐಪಿಎಲ್ ಆಲೋಚನೆಯಿದ್ದರೆ ಜನಪ್ರಿಯ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಆರ್‌ಸಿಬಿಯನ್ನು ಅಲ್ಲಿಗೆ ಕಳಿಸಿ ಅನಿವಾಸಿ ಭಾರತೀಯರು ಮತ್ತು ಭಾರತೀಯ ಸಮುದಾಯದ ಪ್ರತಿಕ್ರಿಯೆಯನ್ನು ಪರೀಕ್ಷಿಸಬಹುದು ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ