ಮೆಂಟರ್ ಆದ ಬೆನ್ನಲ್ಲೇ ಧೋನಿ ವಿರುದ್ಧ ದಾಖಲಾಯ್ತು ಕಂಪ್ಲೇಂಟ್!
ಗುರುವಾರ, 9 ಸೆಪ್ಟಂಬರ್ 2021 (17:20 IST)
ಮುಂಬೈ: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಮೆಂಟರ್ ಆಗಿ ಮಾಜಿ ನಾಯಕ ಧೋನಿ ನೇಮಕಗೊಂಡ ಬೆನ್ನಲ್ಲೇ ಅವರ ವಿರುದ್ಧ ಸ್ವ ಹಿತಾಸಕ್ತಿ ಹುದ್ದೆ ದೂರು ದಾಖಲಾಗಿದೆ.
ಬಿಸಿಸಿಐ ಅಥವಾ ಟೀಂ ಇಂಡಿಯಾಗೆ ಸೇರಿದ ಹುದ್ದೆಯಲ್ಲಿರುವವರು ಯಾವುದೇ ಖಾಸಗಿ ಲಾಭದಾಯಕ ಹುದ್ದೆಯಲ್ಲಿರುವಂತಿಲ್ಲ. ಆದರೆ ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರು ಮತ್ತು ಬೇರೆ ವ್ಯವಹಾರಗಳು ಅವರ ಹೆಸರಿನಲ್ಲಿವೆ. ಹೀಗಾಗಿ ಅವರ ನೇಮಕ ಸ್ವ ಹಿತಾಸಕ್ತಿ ನಿಯಮಕ್ಕೆ ವಿರುದ್ಧವಾದುದು ಎಂದು ದೂರೊಂದು ಬಂದಿದೆ.
ಇದೀಗ ಬಿಸಿಸಿಐ ಮುಂದೆ ಈ ಹೊಸ ತಲೆನೋವು ಬಂದಿದ್ದು, ಇದನ್ನು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.