ಕೊರೋನಾ ಭೀತಿ: ಬಾಲ್ ಗೆ ಜೊಲ್ಲುರಸ ಬಳಸದೇ ಇರಲು ಟೀಂ ಇಂಡಿಯಾ ನಿರ್ಧಾರ

ಗುರುವಾರ, 12 ಮಾರ್ಚ್ 2020 (09:49 IST)
ಧರ್ಮಶಾಲಾ: ದೇಶದಾದ್ಯಂತ ಕೊರೋನಾವೈರಸ್ ದಾಳಿಯಿಡುತ್ತಿರುವ ಹಿನ್ನಲೆಯಲ್ಲಿ ಕ್ರೀಡಾ ಕೂಟಗಳಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆ. ಇಂದಿನಿಂದ ನಡೆಯಲಿರುವ ಭಾರತ-ದ.ಆಫ್ರಿಕಾ ಏಕದಿನ ಸರಣಿಯಲ್ಲಿ ಹಲವು ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ.


ಮೈದಾನದಲ್ಲಿ ಸಾಮಾನ್ಯವಾಗಿ ಚೆಂಡು ಹೊಳಪು ಮೂಡಿಸಲು ಬೌಲರ್ ಗಳು ಜೊಲ್ಲು ರಸ ಬಳಸುತ್ತಾರೆ. ಆದರೆ ಈ ಬಾರಿ ಕೊರೋನಾ ಭೀತಿಯಿಂದ ಆಟಗಾರರು ಜೊಲ್ಲುರಸ ಬಳಕೆ ಕಡಿಮೆ ಮಾಡುವುದಾಗಿ ವೇಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಅದಲ್ಲದೆ, ಶೇಕ್ ಹ್ಯಾಂಡ್ ಮಾಡುವುದನ್ನೂ ಅವಾಯ್ಡ್ ಮಾಡುವ ಸಾಧ‍್ಯತೆಯಿದೆ. ಅದಲ್ಲದೆ, ತಂಡದ ವೈದ್ಯರು ನೀಡುವ ಸಲಹೆಯಂತೆ ಸಾಧ‍್ಯವಿರುವ ಎಲ್ಲಾ ಸುರಕ್ಷತಾ ಕ್ರಮವನ್ನೂ ಕೈಗೊಳ್ಳುವುದಾಗಿ ಭುವಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ