ಕೌಂಟಿ ಕ್ರಿಕೆಟ್ ನಲ್ಲಿ ಕ್ರಿಕೆಟಿಗರು ಪಡೆಯುವ ಸಂಭಾವನೆ ಎಷ್ಟು?
ಗುರುವಾರ, 21 ಸೆಪ್ಟಂಬರ್ 2023 (08:30 IST)
ಲಂಡನ್: ಟೀಂ ಇಂಡಿಯಾದಲ್ಲಿ ಅವಕಾಶ ಸಿಗದ, ಇಂಗ್ಲೆಂಡ್ ಮೈದಾನಗಳಲ್ಲಿ ಅಭ್ಯಾಸ ನಡೆಸಲು ಬಯಸುವ ಆಟಗಾರರು ಕೌಂಟಿ ಕ್ರಿಕೆಟ್ ಆಡುತ್ತಾರೆ.
ಟೀಂ ಇಂಡಿಯಾದ ಸ್ಟಾರ್ ಆಟಗಾರರೂ ಕೌಂಟಿ ಕ್ರಿಕೆಟ್ ನಲ್ಲಿ ಆಡಿ ಗಮನ ಸೆಳೆದಿದ್ದಾರೆ. ಇದೀಗ ಚೇತೇಶ‍್ವರ ಪೂಜಾರ, ಪೃಥ‍್ವಿ ಶಾ ಅವರಂತಹ ಆಟಗಾರರು ಕೌಂಟಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ಹಾಗಿದ್ದರೆ ಕೌಂಟಿ ಕ್ರಿಕೆಟ್ ನಲ್ಲಿ ಆಟಗಾರರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?
ಕೌಂಟಿ ಕ್ರಿಕೆಟ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ಹೆಸರು ಮಾಡಿರುವ ಆಟಗಾರರಿಗೆ 1 ಕೋಟಿ ರೂ.ಗಳವರೆಗೂ ಸಂಭಾವನೆ ಸಿಗುತ್ತದೆ. ಆಟಗಾರನ ದೇಶ, ಆತನಿಗಿರುವ ಖ್ಯಾತಿ, ಆತನ ಗುತ್ತಿಗೆ ಆಧಾರದಲ್ಲಿ ಸಂಭಾವನೆ ನಿರ್ಧಾರವಾಗುತ್ತದೆ. ದೇಶೀಯ ಆಟಗಾರರಿಗೆ 30 ರಿಂದ 50 ಲಕ್ಷ ರೂ.ವರೆಗೆ ಸಂಭಾವನೆ ದೊರೆಯುತ್ತದೆ. ಸಾಮಾನ್ಯವಾಗಿ ಕೌಂಟಿ ಕ್ರಿಕೆಟ್ ನಲ್ಲಿ ಆಟಗಾರರನ್ನು ಗುತ್ತಿಗೆ ಆಧಾರದಲ್ಲಿ ಒಂದಷ್ಟು ಪಂದ್ಯಗಳಿಗೆ ನೇಮಿಸಲಾಗುತ್ತದೆ. ಆದರೆ ಐಪಿಎಲ್ ನಷ್ಟು ಶ್ರೀಮಂತ ಕ್ರೀಡೆ ಇದಲ್ಲ. ಆದರೆ ಹಲವು ಆಟಗಾರರಿಗೆ ಅನುಭವ ಕಟ್ಟಿಕೊಳ್ಳಲು ವೇದಿಕೆಯಾಗುತ್ತದೆ.