ಟೀಂ ಇಂಡಿಯಾ ಕ್ರಿಕೆಟಿಗರ ಗಣೇಶ ಹಬ್ಬ ಸಂಭ್ರರಮ: ಫ್ಯಾನ್ಸ್ ಜೊತೆ ಕಾಲ ಕಳೆದ ರೋಹಿತ್ ಶರ್ಮಾ
ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಗಣೇಶನ ಕೂರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆ ಮಾಡಿದ ಫೋಟೋಗಳನ್ನು ಪ್ರಕಟಿಸಿದ್ದಾರೆ. ಕೆಎಲ್ ರಾಹುಲ್ ಕೂಡಾ ಸಾಂಪ್ರದಾಯಿಕ ಉಡುಗೆಯಲ್ಲಿ ಗಣೇಶ ಹಬ್ಬ ಆಚರಿಸಿಕೊಂಡಿದ್ದಾರೆ.
ಇನ್ನು, ನಾಯಕ ರೋಹಿತ್ ಶರ್ಮಾ ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ಅಭಿಮಾನಿಗಳ ಜೊತೆಗೂ ಕಾಲ ಕಳೆದು ಮನಗೆದ್ದಿದ್ದಾರೆ. ವಿಶ್ವಕಪ್ ಗೆ ಮುನ್ನ ಆಟಗಾರರಿಗೆ ಕೊಂಚ ಕುಟುಂಬದವರ ಜೊತೆ ರಿಲ್ಯಾಕ್ಸ್ ಆಗಲು ಸಮಯ ಸಿಕ್ಕಿದ್ದು, ಅದನ್ನು ಸರಿಯಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ.