ಕ್ರಿಕೆಟ್ ನಲ್ಲಿ ಬಳಕೆಯಾಗುವ ಎಲ್ ಇಡಿ ಸ್ಟಂಪ್ಸ್ ಗಳು ಎಷ್ಟು ದುಬಾರಿ ಗೊತ್ತಾ?

ಗುರುವಾರ, 6 ಅಕ್ಟೋಬರ್ 2022 (07:40 IST)
ನವದೆಹಲಿ: ಟಿ20, ಏಕದಿನ ಕ್ರಿಕೆಟ್ ನಲ್ಲಿ ಚೆಂಡು ವಿಕೆಟ್ ಬಡಿದಾಗ ಸ್ಟಂಪ್ಸ್ ನಲ್ಲಿ ಲೈಟ್ ಬೆಳಗುವುದನ್ನು ನಾವು ಗಮನಿಸಿರುತ್ತೇವೆ. ಸಾಮಾನ್ಯ ಸ್ಟಂಪ್ಸ್ ಗಳಿಗಿಂತ ಈ ಎಲ್ ಇಡಿ ಸ್ಟಂಪ್ಸ್ ಗಳು ಎಷ್ಟು ದುಬಾರಿ ಗೊತ್ತಾ?

ಚೆಂಡು ತಗುಲಿರುವುದು ಸ್ಪಷ್ಟವಾಗಿ ಗೊತ್ತಾಗಲು ಈ ಎಲ್ ಇಡಿ ಸ್ಟಂಪ್ಸ್ ಬಳಕೆ ಮಾಡಲಾಗುತ್ತದೆ. ಮೊದಲಿಗೆ ಬಿಗ್ ಬಾಶ್ ಲೀಗ್ ನಂತಹ ಲೀಗ್ ಪಂದ್ಯಾವಳಿಗಳಲ್ಲಿ ಇದನ್ನು ಬಳಕೆ ಮಾಡಲಾಯಿತು. ಭಾರತದಲ್ಲಿ ಐಪಿಎಲ್ ನಲ್ಲಿ ಈ ಪ್ರಯೋಗ ನಡೆಸಲಾಯಿತು. ಈಗ ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಈ ರೀತಿಯ ಸ್ಟಂಪ್ಸ್ ಬಳಕೆ ಮಾಡುವುದು ಕಾಮನ್ ಆಗಿದೆ.

ಈ ಸ್ಟಂಪ್ಸ್ ಗಳು ಇತರ ಸ್ಟಂಪ್ಸ್ ಗಿಂತ ದುಬಾರಿ. ಭಾರತದಲ್ಲಿ ಈ ಸ್ಟಂಪ್ಸ್ ಬೆಲೆ ಬರೋಬ್ಬರಿ 30 ಲಕ್ಷ ರೂ.ಗಳಷ್ಟಿದೆ. ಇತರ ಸ್ಟಂಪ್ಸ್ ಗಿಂತ ಈ ಸ್ಟಂಪ್ಸ್ ಬೆಲೆ ಶೇ.12 ರಷ್ಟು ಹೆಚ್ಚು. ಹೀಗಾಗಿಯೇ ಹಿಂದೊಮ್ಮೆ ಪಂದ್ಯ ಗೆದ್ದ ಬಳಿಕ ಸ್ಮರಣಾರ್ಥವಾಗಿ ಸ್ಟಂಪ್ಸ್ ತೆಗೆದುಕೊಂಡು ಹೋಗುತ್ತಿದ್ದ ಧೋನಿಗೆ ಐಸಿಸಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿತ್ತು.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ