ಏಕದಿನ ವಿಶ್ವಕಪ್ ಕ್ರಿಕೆಟ್: ಆಫ್ಘನ್-ಆಸೀಸ್ ನಡುವೆ ಇಂದು ಸೆಮಿಫೈನಲ್ ಗಾಗಿ ಕದನ
ಅಫ್ಘಾನಿಸ್ತಾನ ಇಂದಿನ ಪಂದ್ಯವನ್ನೂ ಗೆದ್ದರೆ ಸೆಮಿಫೈನಲ್ ರೇಸ್ ನಲ್ಲಿ ಉಳಿಯಬಹುದಾಗಿದೆ. ಅಫ್ಘನ್ ತಂಡ ಈ ಬಾರಿ ಕೆಲವು ಅಚ್ಚರಿ ಫಲಿತಾಂಶ ನೀಡಿದ್ದು ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಕಂಡಿದೆ. ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ ಅಫ್ಘಾನಿಸ್ತಾನ ಸೆಮಿಫೈನಲ್ ರೇಸ್ ನಲ್ಲಿ ಇದ್ದರೂ ಇರಬಹುದು! ಜೊತೆಗೆ ನ್ಯೂಜಿಲೆಂಡ್ ಅವಕಾಶವೂ ಕ್ಷೀಣವಾಗಲಿದೆ.
ಇನ್ನು, ಆಸ್ಟ್ರೇಲಿಯಾ ಕೂಡಾ 7 ಪಂದ್ಯಗಳಿಂದ 5 ಗೆಲುವು ಸಂಪಾದಿಸಿದ್ದು, ಸೆಮಿಫೈನಲ್ ರೇಸ್ ನಲ್ಲಿದ್ದರೂ ಇನ್ನೂ ಸ್ಥಾನ ಖಚಿತವಾಗಿಲ್ಲ. ಹೀಗಾಗಿ ಆಸೀಸ್ ಇಂದೂ ಭರ್ಜರಿ ಅಂತರದಲ್ಲಿ ಗೆದ್ದರೆ ಎರಡನೇ ಸ್ಥಾನಕ್ಕೇರಬಹುದು. ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.