ಏಕದಿನ ವಿಶ್ವಕಪ್ ಕ್ರಿಕೆಟ್: ಬೆರಳಿಗೆ ಗಾಯ ಮಾಡಿಕೊಂಡ ರೋಹಿತ್ ಶರ್ಮಾ
ಬಾಲ್ ತಡೆಯುವ ಯತ್ನದಲ್ಲಿ ರೋಹಿತ್ ಕೈಗೆ ಏಟು ಮಾಡಿಕೊಂಡರು. ತಕ್ಷಣವೇ ನೋವಿನಿಂದಾಗಿ ಪೆವಿಲಿಯನ್ ಗೆ ತೆರಳಿದ ರೋಹಿತ್ ಚಿಕಿತ್ಸೆ ಪಡೆದುಕೊಂಡು ಕೆಲವೇ ಕ್ಷಣಗಳಲ್ಲಿ ಮೈದಾನಕ್ಕೆ ವಾಪಸ್ ಆಗಿದ್ದಾರೆ.
ರೋಹಿತ್ ಗೆ ಗಾಯವಾದಾಗ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಆದರೆ ತಕ್ಷಣವೇ ಅವರು ಮೈದಾನಕ್ಕೆ ಕಮ್ ಬ್ಯಾಕ್ ಮಾಡಿದ್ದರಿಂದ ಗಾಯ ಗಂಭೀರವಲ್ಲ ಎಂದು ತಿಳಿದುಬಂದಿದ್ದು, ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.