ಏಕದಿನ ವಿಶ್ವಕಪ್ ಕ್ರಿಕೆಟ್: ಕಿವೀಸ್ ಬ್ಯಾಟಿಗರಿಗೆ ಟೀಂ ಇಂಡಿಯಾ ಬೌಲರ್ ಗಳ ಅಂಕುಶ

ಭಾನುವಾರ, 22 ಅಕ್ಟೋಬರ್ 2023 (15:29 IST)
Photo Courtesy: Twitter
ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಪ್ರಬಲ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಕಿವೀಸ್ ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ.

ಆರಂಭಿಕ ಆಘಾತದ ಬಳಿಕ ಇದೀಗ ರಚಿನ್ ರವೀಂದ್ರ 29, ಡೆರಿಲ್ ಮಿಚೆಲ್ 23 ರನ್ ಗಳಿಸಿ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುವ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ನಡುವೆ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ರಚಿನ್ ರವೀಂಧ್ರ ನೀಡಿದ ಕ್ಯಾಚ್ ನ್ನು ರವೀಂದ್ರ ಜಡೇಜಾ ಕೈ ಚೆಲ್ಲಿದ್ದಾರೆ.

 
ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಬದಲಿಗೆ ಮೊಹಮ್ಮದ್ ಶಮಿ ಕಣಕ್ಕಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ