ಏಕದಿನ ವಿಶ್ವಕಪ್: ಚೋಕರ್ಸ್ ಹಣೆಪಟ್ಟಿ ಕಳೆಯುವುದೇ ದ.ಆಫ್ರಿಕಾ?

ಗುರುವಾರ, 16 ನವೆಂಬರ್ 2023 (09:00 IST)
Photo Courtesy: Twitter
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ನ ಎರಡನೇ ಸೆಮಿಫೈನಲ್ ಇಂದು ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

ದ.ಆಫ್ರಿಕಾ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಕೇವಲ ಭಾರತದ ವಿರುದ್ಧ ಮಾತ್ರ ಆಫ್ರಿಕಾ ಸೋತಿತ್ತು. ಉಲಿದೆಲ್ಲಾ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಕ್ವಿಂಟನ್ ಡಿ ಕಾಕ್, ಬವುಮಾ, ಡುಸೆನ್ ರಂತಹ ಘಟಾನುಘಟಿ ಬ್ಯಾಟಿಗರನ್ನು ತಂಡ ಹೊಂದಿದೆ. ಆಸ್ಟ್ರೇಲಿಯಾ ಕೂಡಾ ಲೀಗ್ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ಸೋತಿತ್ತು. ಆದರೆ ನಿರ್ಣಾಯಕ ಪಂದ್ಯಗಳಲ್ಲಿ ಆಫ್ರಿಕಾ ಸೋಲುವ ಚಾಳಿ ಹೊಂದಿದ್ದು, ಇಂದು ಆ ಚೋಕರ್ಸ್ ಹಣೆಪಟ್ಟಿ ಕಳೆಯುವ ವಿಶ್ವಾಸದಲ್ಲಿದೆ.

ಆದರೆ ಆಸ್ಟ್ರೇಲಿಯಾ ಆರಂಭದಲ್ಲಿ ಮಂಕು ಕವಿದಂತಿದ್ದರೂ ಬಳಿಕ ತನ್ನ ಖ್ಯಾತಿಗೆ ತಕ್ಕ ಆಟವಾಡಿತ್ತು. ಅಫ್ಘಾನಿಸ್ತಾನ ವಿರುದ್ಧ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಐತಿಹಾಸಿಕ ಇನಿಂಗ್ಸ್ ಒಂದೇ ಆ ತಂಡಕ್ಕೆ ಬೂಸ್ಟ್ ಸಿಕ್ಕಂತಾಗಿರಬಹುದು. ಕೊನೆಯ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಫೈನಲ್ ಗೆ ಲಗ್ಗೆಯಿಡುವ ಉತ್ಸಾಹದಲ್ಲಿದೆ.  ಈ ಪಂದ್ಯ ಅಪರಾಹ್ನ 2 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ