ಚೆಂಡು ವಿರೂಪ ಪ್ರಕರಣದಿಂದ ಡೇವಿಡ್ ವಾರ್ನರ್ ಗೆ ಮತ್ತೊಂದು ಶಾಕ್!
ನೇರವಾಗಿ ಚೆಂಡು ವಿರೂಪ ಮಾಡದಿದ್ದರೂ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ವಾರ್ನರ್ ವಿಲನ್ ಆಗಿದ್ದಾರೆ. ಇದೇ ಕಾರಣಕ್ಕೆ ಇದೀಗ ಅವರ ಜೇಬಿಗೂ ಕತ್ತರಿ ಬೀಳಲಿದೆ. ಅಂದರೆ ಪ್ರಮುಖ ಇಲೆಕ್ಟ್ರಾನಿಕ್ ಸಂಸ್ಥೆ ಎಲ್ ಜಿ ವಾರ್ನರ್ ಜತೆಗಿನ ರಾಯಭಾರಿ ಒಪ್ಪಂದ ಈ ವಾರ ಕೊನೆಗೊಳ್ಳಲಿದ್ದು, ಅದನ್ನು ಮುಂದುವರಿಸದೇ ಇರಲು ಸಂಸ್ಥೇ ತೀರ್ಮಾನಿಸಿದೆ.
ಚೆಂಡು ವಿರೂಪ ಕಳಂಕ ಹೊಂದಿರುವ ಕಾರಣಕ್ಕೆ ವಾರ್ನರ್ ಜತೆಗಿನ ಒಪ್ಪಂದ ನವೀಕರಿಸಲು ನಾವು ಬಯಸುತ್ತಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇದರಿಂದ ವಾರ್ನರ್ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.