ನಿಷೇಧದ ಭೀತಿಯಲ್ಲಿ ಕೆಎಲ್ ರಾಹುಲ್, ರಶೀದ್ ಖಾನ್

ಬುಧವಾರ, 1 ಡಿಸೆಂಬರ್ 2021 (10:08 IST)
ಮುಂಬೈ: ಐಪಿಎಲ್ 2022 ರಲ್ಲಿ ಹರಾಜಿಗೊಳಗಾಗಲು ನಿರ್ಧರಿಸಿರುವ ಪಂಜಾಬ್ ನಾಯಕ ಕೆಎಲ್ ರಾಹುಲ್ ಮತ್ತು ಹೈದರಾಬಾದ್ ನ ರಶೀದ್ ಖಾನ್ ಈಗ ನಿಷೇಧದ ಭೀತಿಯಲ್ಲಿದ್ದಾರೆ.

ಇಬ್ಬರೂ ಆಟಗಾರರು ತಮ್ಮ ಫ್ರಾಂಚೈಸಿಯಲ್ಲಿರುವಾಗಲೇ ಲಕ್ನೋ ಫ್ರಾಂಚೈಸಿ ಅವರನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಲು ಮಾತುಕತೆ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ನಿಯಮಗಳಿಗೆ  ವಿರುದ್ಧವಾಗಿದ್ದು, 1 ವರ್ಷ ನಿಷೇಧಕ್ಕೊಳಗಾಗಬಹುದಾಗಿದೆ.

ಆದರೆ ಇದುವರೆಗೆ ಈ ಬಗ್ಗೆ ಲಿಖಿತ ದೂರು ಬಂದಿಲ್ಲ. ಬಂದರೆ ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಹೇಳಿದೆ. ಲಕ್ನೋ ತಂಡ ರಾಹುಲ್ ಗೆ 20 ಕೋಟಿ, ರಶೀದ್ ಖಾನ್ ಗೆ 16 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ