ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿರುವ ಮೂರು ವಿಶೇಷತೆಗಳೇನು?

ಗುರುವಾರ, 21 ನವೆಂಬರ್ 2019 (09:51 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಾಳೆಯಿಂದಆರಂಭವಾಗಲಿದ್ದು, ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿರುವ ವಿಶೇಷತೆಗಳೇನು ಗೊತ್ತಾ?


ಟೆಸ್ಟ್ ಪಂದ್ಯವೆಂಬುದು ಸಾಮಾನ್ಯವಾಗಿ ಬೆಳಿಗ್ಗಿನಿಂದ ಸಂಜೆಯ ತನಕ ನಡೆಯುತ್ತದೆ. ಆದರೆ ಇದು ಮಧ್ಯಾಹ್ನ ಆರಂಭವಾಗಿ ರಾತ್ರಿ ದಿನದಾಟ ಕೊನೆಯಾಗುತ್ತದೆ. ಇನ್ನು ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಕೆಂಪು ಚೆಂಡು ಬಳಕೆಯಾಗುತ್ತದೆ. ಆದರೆ ಹಗಲು ರಾತ್ರಿ ಪಂದ್ಯದಲ್ಲಿ ಪಿಂಕ್ ಚೆಂಡು ಬಳಕೆಯಾಗುತ್ತದೆ. ಪಿಂಕ್ ಚೆಂಡು ರಾತ್ರಿ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಪಿಂಕ್ ಚೆಂಡು ಬಳಸಲಾಗುತ್ತದೆ.

ಇನ್ನು ಟೆಸ್ಟ್ ಕ್ರಿಕೆಟ್ ಆಡುವ ಪ್ರತಿಷ್ಠಿತ ತಂಡಗಳ ಪೈಕಿ ಭಾರತ ಕೊನೆಯದಾಗಿ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡುತ್ತಿದೆ ಎನ್ನುವುದು ವಿಶೇಷ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ