ಹಗಲು ರಾತ್ರಿ ಪಂದ್ಯವು ಕ್ರೀಡೆಯ ಭವಿಷ್ಯವಾಗಿದೆ. ಅಡೆಲೈಡ್ ಓವಲ್‌ನಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆಡಿದಾಗ ಇದೊಂದು ಅದ್ಭುತ ನೋಟವಾಗಿತ್ತು. ನಿಜವಾಗಲೂ ಇದು ನೆರೆದ ಗುಂಪನ್ನು ಆಕರ್ಷಿಸಿದ್ದು, ಟಿವಿ ವೀಕ್ಷಣೆಗೆ ಕೂಡ ಸೂಕ್ತವಾಗಿತ್ತು ಎಂದು ರಿಚರ್ಡ್ ಇಲ್ಲಿನ ಬಾಂಬೆ ಹೌಸ್‌ನಲ್ಲಿ ವರದಿಗಾರರಿಗೆ ತಿಳಿಸಿದರು.