ದಿವಾಳಿಯಾದ ದೆಹಲಿ ಕ್ರಿಕೆಟ್ ಸಂಸ್ಥೆಯಿಂದ ಬಿಸಿಸಿಐಗೆ ಹಣ ಕೊಡುವಂತೆ ಬೇಡಿಕೆ

ಬುಧವಾರ, 4 ಜನವರಿ 2017 (10:17 IST)
ನವದೆಹಲಿ: ಭಾರತೀಯ ಕ್ರಿಕೆಟ್ ಮಂಡಳಿಯೇ ಪೈಸೆ ಪೈಸೆಗೂ ನ್ಯಾಯಾಲಯದ ಮುಖ ನೋಡುವಂತೆ ಆಗಿದೆ. ಅಂಥಾದ್ದರಲ್ಲಿ ದೆಹಲಿ ಕ್ರಿಕೆಟ್ ಸಂಸ್ಥೆ ತಾನು ದೀವಾಳಿಯಾಗಿದ್ದು, 2 ಕೋಟಿ ರೂ. ನೀಡುವಂತೆ ಅಂಗಲಾಚಿದೆ.

ತನ್ನ ಸ್ಥಿತಿ ದಯನೀಯವಾಗಿದೆ. ಕರೆಂಟ್ ಬಿಲ್, ಹೋಟೆಲ್ ಬಿಲ್, ಮತ್ತಿತರ ಮೂಲಭೂತ ಅಗತ್ಯ ಪೂರೈಸಿಕೊಳ್ಳಲೂ ತಮ್ಮ ಬಳಿ ದುಡ್ಡಿಲ್ಲ. ಅಧಿಕಾರಿಗಳಿಗೆ ವೇತನ ನೀಡಿಲ್ಲ. ಸದ್ಯಕ್ಕೆ ಡಿಡಿಸಿಎ ಬ್ಯಾಂಕ್ ಖಾತೆಯಲ್ಲಿ ಕೇವಲ 15 ಲಕ್ಷ ರೂ. ಇದೆ ಎಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ಪತ್ರ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಆರ್ಥಿಕವಾಗಿ ಡಿಡಿಸಿಎ ಸಂಕಷ್ಟದಲ್ಲಿದೆ. ಆದರೆ ಈಗ ಬಿಸಿಸಿಐ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವೆನಲ್ಲ. ಅಧ್ಯಕ್ಷ, ಕಾರ್ಯದರ್ಶಿಗಳು ಅಧಿಕಾರ ಕಳೆದುಕೊಂಡಿದ್ದಾರೆ. ಹೀಗಿರುವಾಗ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಸಲಹೆಗಾರರಾದ ಅನಿಲ್ ದಿವಾನ್ ಮತ್ತು ಗೋಪಾಲ್ ಸುಬ್ರಮಣಿಯನ್ ಹಾಗೂ ಸಿಇಒ ರಾಹುಲ್ ಜೋಹ್ರಿ ಡಿಡಿಸಿಎ ಬೇಡಿಕೆ ಪರಿಗಣಿಸುತ್ತಾರಾ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ