ನರಸಿಂಗ್ ಯಾದವ್‌ಗೆ ರಿಯೋ ಬಸ್ ಮಿಸ್ ಆಗದಂತೆ ಶತಪ್ರಯತ್ನ

ಮಂಗಳವಾರ, 2 ಆಗಸ್ಟ್ 2016 (12:46 IST)
ನರಸಿಂಗ್ ಯಾದವ್ ಕಳೆದ ತಿಂಗಳ ಅನಾಬೋಲಿಕ್ ಸ್ಟೆರಾಯ್ಡ್ ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಪಡೆದ ಬಳಿಕ ಈಗ ನಾಡಾ ಕ್ಲೀನ್ ಚಿಟ್ ನೀಡಿದ್ದರೂ ಕೂಡ ರಿಯೋದ ಹಾದಿ ಯಾದವ್‌ಗೆ ಇನ್ನೂ ಕಠಿಣವಾಗಿದೆ. ಆಗಸ್ಟ್ 5ರಿಂದ ಆರಂಭವಾಗುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ರಿಯೋದಲ್ಲಿರುವ ಸಹ ಅಥ್ಲೀಟ್‌ಗಳನ್ನು ಸೇರಲು ಇನ್ನಷ್ಟು ಹಾದಿಯನ್ನು ಅವರು ಸವೆಸಬೇಕಾಗಿದೆ.
 
 ನರಸಿಂಗ್ ರಿಯೋದಲ್ಲಿ ಭಾಗವಹಿಸಲು ಇನ್ನೊಂದು ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಾಡಾ ಮತ್ತು ಐಒಸಿಯ ಅನುಮೋದನೆ ಪಡೆಯಬೇಕಾಗಿದೆ. ಇದಿಷ್ಟೇ ಅಲ್ಲದೇ ಸಂಯುಕ್ತ ವಿಶ್ವ ಕುಸ್ತಿ ಸಂಘಟನೆಯು 74 ಕೆಜಿ ವಿಭಾಗದಲ್ಲಿ ಪ್ರವೀಣ್ ರಾಣಾಗೆ ಬದಲಿಯಾಗಿ ಪುನಃ ಅವರನ್ನು ಮರುಸ್ಥಾಪನೆ ಮಾಡಲು ಒಪ್ಪಬೇಕಾಗಿದೆ.
 
ಸಂಯುಕ್ತ ವಿಶ್ವ ಕುಸ್ತಿ ಸಂಘಟನೆಗೆ ಇಂದು ಪತ್ರ ಬರೆದು ಪ್ರವೀಣ್ ರಾಣಾ ಹೆಸರಿಗೆ ಬದಲಿಯಾಗಿ ನರಸಿಂಗ್ ಯಾದವ್ ಅವರನ್ನು ಕಳಿಸುವಂತೆ ಕೋರುವುದಾಗಿ ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ತಿಳಿಸಿದರು. ನರಸಿಂಗ್ ಯಾದವ್ ರಿಯೋ ಬಸ್ ಮಿಸ್ ಮಾಡಿಕೊಳ್ಳದಂತೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುವುದಾಗಿಯೂ ಅವರು ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ