ವಿರಾಟ್ ಕೊಹ್ಲಿಯನ್ನೂ ಮೀರಿದ ಧೋನಿ ಹೊಸ ದಾಖಲೆ
ಯು ಗವ್ ಎನ್ನುವ ಆನ್ ಲೈನ್ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಧೋನಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಕೊಹ್ಲಿಗಿಂತ ಹೆಚ್ಚು ಅಭಿಮಾನಿಗಳು ಮೆಚ್ಚಿಕೊಳ್ಳುವ ಆಟಗಾರ ಎನಿಸಿಕೊಂಡಿದ್ದಾರೆ.
ಧೋನಿ 7.7 ಶೇಕಡಾ ಅಂಕ ಪಡೆದರೆ, ತೆಂಡುಲ್ಕರ್ 6.8 ಶೇಕಡಾ, ವಿರಾಟ್ ಕೊಹ್ಲಿ 4.8 ಶೇಕಡಾ ಅಂಕ ಗಳಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಧೋನಿಗೆ ಇದು ಹೊಸ ಹೆಗ್ಗಳಿಕೆ.