ಟೀಂ ಇಂಡಿಯಾವನ್ನು ಕಾಡಿಸಿ ಬೆವರಳಿಸುತ್ತಿರುವ ಎಸೆಕ್ಸ್

ಶುಕ್ರವಾರ, 27 ಜುಲೈ 2018 (16:07 IST)
ಚೆಮ್ಸ್ ಫೋರ್ಡ್: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ಎಸೆಕ್ಸ್ ತಂಡ ಭಾರತೀಯ ಬೌಲರ್ ಗಳನ್ನು ಸಂಪೂರ್ಣವಾಗಿ ಹತಾಶೆಗೆ ದೂಡಿದ್ದಾರೆ.
 

ಅತ್ತ ವಿಕೆಟ್ ಕೀಳಲಾಗದೆ ಇತ್ತ ಸರಾಗ ಹರಿದುಬರುತ್ತಿರುವ ರನ್ ನಿಯಂತ್ರಿಸಲಾಗದೆ ಭಾರತೀಯರು ಒದ್ದಾಡುವಂತಾಗಿದೆ. ನಿನ್ನೆ 5 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿ ದಿನದಾಟ ಅಂತ್ಯಗೊಳಿಸಿದ್ದ ಎಸೆಕ್ಸ್ ಇಂದು ಇತ್ತೀಚೆಗಿನ ವರದಿ ಬಂದಾಗ ಆತ್ಮವಿಶ್ವಾಸದಿಂದಲೇ ಟೀಂ ಇಂಡಿಯಾ ಬೌಲರ್ ಗಳನ್ನು ಎದುರಿಸುತ್ತಿದ್ದು ವಿಕೆಟ್ ನಷ್ಟವಿಲ್ಲದೇ ಮತ್ತೆ 32 ರನ್ ಪೇರಿಸಿದೆ.

ಬೌಲಿಂಗ್ ನಲ್ಲಿ ಟೀಂ ಇಂಡಿಯಾಗೆ ಕಾಡಿದ್ದ ವಾಲ್ಟರ್ ಬ್ಯಾಟಿಂಗ್ ನಲ್ಲೂ ಮಿಂಚುತ್ತಿದ್ದು 28 ರನ್ ಗಳಿಸಿ ಆಡುತ್ತಿದ್ದಾರೆ. ಇದೀಗ ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 395 ರನ್ ಗಳ ಗುರಿ ದಾಟಲು ಎಸೆಕ್ಸ್ ಗೆ 138 ರನ್ ಗಳಿಸಿದರೆ ಸಾಕು. ಇಂದು ಅಂತಿಮ ದಿನವಾದ್ದರಿಂದ ಪಂದ್ಯ ಡ್ರಾದತ್ತ ಸಾಗಬಹುದು. ಆದರೂ ಈ ಪಂದ್ಯದ ಮೂಲಕ ಟೀಂ ಇಂಡಿಯಾದ ಹುಳುಕು ಹೊರಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ