ಟೀಂ ಇಂಡಿಯಾ ಅವಸ್ಥೆ ನೋಡಿ ಕೆಂಡಾಮಂಡಲಾರದ ವೀರೇಂದ್ರ ಸೆಹ್ವಾಗ್

ಶುಕ್ರವಾರ, 27 ಜುಲೈ 2018 (09:15 IST)
ಮುಂಬೈ: ಟೀಂ ಇಂಡಿಯಾದ ಬಿಡುವಿಲ್ಲದ ವೇಳಾಪಟ್ಟಿ ನೋಡಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೆಂಡಾಮಂಡಲರಾಗಿದ್ದು, ಈ ಮಟ್ಟಿಗೆ ಯಾರಾದ್ರೂ ಕ್ರಿಕೆಟ್ ಆಡ್ತಾರಾ ಎಂದು ಪ್ರಶ್ನಿಸಿದ್ದಾರೆ.
 

ಇಂಗ್ಲೆಂಡ್ ಸರಣಿ ಮುಗಿದು ಎರಡು ದಿನಗಳಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಗೆ ತಯಾರಾಗಬೇಕಿದೆ. ಇಂತಹ ಬಿಡುವಿಲ್ಲದ ಶೆಡ್ಯೂಲ್ ನಿಗದಿಪಡಿಸುವ ಬಿಸಿಸಿಐ ವಿರುದ್ಧ ಸೆಹ್ವಾಗ್ ಕೆಂಡ ಕಾರಿದ್ದಾರೆ.

‘ಇಂದಿನ ದಿನಗಳಲ್ಲಿ ಯಾವುದೇ ತಂಡವೂ ಎರಡು ದಿನಗಳ ಬಿಡುವೂ ಇಲ್ಲದೇ ಮತ್ತೊಂದು ಟೂರ್ನಿ ಆಡುವುದಿಲ್ಲ. ಆದರೆ ಭಾರತ ಇಂಗ್ಲೆಂಡ್ ನಲ್ಲಿ ಟೆಸ್ಟ್, ಟಿ20 ಆಡಿ, ಎರಡು ದಿನಗಳೊಳಗೆ ದುಬೈಗೆ ಬಂದಿಳಿದು ಅಲ್ಲಿನ ಬಿಸಿಲ ವಾತಾವರಣದಲ್ಲಿ ಏಷ್ಯಾ ಕಪ್ ಆಡಬೇಕಿದೆ. ಇದು ಸರಿಯಾದ ರೀತಿ ಅಲ್ಲ’ ಎಂದು ಸೆಹ್ವಾಗ್ ಕಿಡಿ ಕಾರಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್ ‘ಒಂದು ಟಿ20 ಪಂದ್ಯವಾದ ಬಳಿಕವೇ ಎರಡು ದಿನದ ವಿಶ್ರಾಂತಿ ಸಿಕ್ಕುತ್ತದೆ. ಅಂತಹದ್ದರಲ್ಲಿ ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿ ಆಡುವಾಗ ಈ ರೀತಿ ಬಿಡುವಿಲ್ಲದೇ ಆಡುವುದು ಸರಿಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ