ರಾಹುಲ್ ದ್ರಾವಿಡ್ ದಾಖಲೆ ಮೇಲೆ ಧೋನಿ ಕಣ್ಣು

ಭಾನುವಾರ, 27 ಜನವರಿ 2019 (09:15 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಏಕದಿನ ಪಂದ್ಯವಾಡಿದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.


334 ನೇ ಏಕದಿನ ಪಂದ್ಯವಾಡಿದ ಧೋನಿ ಈಗ ಭಾರತದ ಪರ ಅತ್ಯಧಿಕ ಏಕದಿನ ಪಂದ್ಯವಾಡಿದ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಅಜರುದ್ದೀನ್ ಜತೆಗೆ ಮೂರನೇ ಸ್ಥಾನ ಹಂಚಿಕೊಂಡರು.

ಪಟ್ಟಿಯಲ್ಲಿ ಮೊದಲ ಸ್ಥಾನ ಸಚಿನ್ ತೆಂಡಲ್ಕರ್ ಗೆ. ಅವರು 463 ಏಕದಿನ ಪಂದ್ಯವಾಡಿದ್ದಾರೆ. ಇನ್ನು, 340 ಪಂದ್ಯವಾಡಿದ ರಾಹುಲ್ ದ್ರಾವಿಡ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆದರೆ ಇದೀಗ ಧೋನಿ ದ್ರಾವಿಡ್ ದಾಖಲೆ ಮುರಿಯಲು ಆರು ಏಕದಿನ ಪಂದ್ಯವಾಡಬೇಕಿದೆ. ಅದಾದ ಬಳಿಕ ದ್ರಾವಿಡ್ ರನ್ನು ಹಿಂದಿಕ್ಕಿ ಧೋನಿ ನಂ.2 ಆಟಗಾರನಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ