ಈ ದಿಗ್ಗಜರ ದಾಖಲೆ ಮುರಿದ ಶಿಖರ್ ಧವನ್-ರೋಹಿತ್ ಶರ್ಮಾ
ಈ ಜೋಡಿ ಒಟ್ಟು 14 ಬಾರಿ ಶತಕದ ಜತೆಯಾಟವಾಡಿದ ದಾಖಲೆ ಮಾಡಿತು. ಇದಕ್ಕೂ ಮೊದಲು ಸೆಹ್ವಾಗ್-ಸಚಿನ್ ಜೋಡಿ 13 ಬಾರಿ ಶತಕದ ಜತೆಯಾಟವಾಡಿದ್ದರು. ಹಾಗಿದ್ದರೂ ಪಟ್ಟಿಯಲ್ಲಿ ಮೊದಲ ಸ್ಥಾನ ಸಚಿನ್ ಮತ್ತು ಗಂಗೂಲಿ ಹೆಸರಿನಲ್ಲಿದ್ದು, ಇವರು ಒಟ್ಟು 26 ಬಾರಿ ಶತಕದ ಜತೆಯಾಟವಾಡಿದ್ದಾರೆ. ಎರಡನೇ ಸ್ಥಾನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರಿನಲ್ಲಿದೆ. ಈ ಜೋಡಿ ಒಟ್ಟು 15 ಬಾರಿ ಶತಕದ ಜತೆಯಾಟವಾಡಿದ್ದಾರೆ.