ರೋಹಿತ್ ಶರ್ಮಾ ಪತ್ನಿ ಮೇಲೆ ಧೋನಿ ಅಭಿಮಾನಿಗಳು ಗರಂ!

ಸೋಮವಾರ, 9 ಏಪ್ರಿಲ್ 2018 (08:35 IST)
ಮುಂಬೈ: ಐಪಿಎಲ್ 11 ರ ಮೊದಲ ಪಂದ್ಯದಲ್ಲೇ ಚೆನ್ನೈ ವಿರುದ್ಧ ಸೋಲನುಭವಿಸಿದ ಮೇಲೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಚ್ ದೇವ್ ಪ್ರಕಟಿಸಿದ ಇನ್ ಸ್ಟಾಗ್ರಾಂ ಫೋಟೋವೊಂದು ಧೋನಿ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ.

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿದ ಮೇಲೆ ಪತಿಗೆ ಸಮಾಧಾನಿಸಲು ರೋಹಿತ್ ಪತ್ನಿ ರಿತಿಕಾ ‘ಕ್ಯಾಪ್ಟನ್ ಕೂಲ್’ ಎಂದು ಅಡಿಬರಹ ಕೊಟ್ಟು ಫೋಟೋವೊಂದನ್ನು ಪ್ರಕಟಿಸಿದ್ದರು.

ಧೋನಿ ಜಾಗತಿಕ ಕ್ರಿಕೆಟ್ ನಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಪ್ರಖ್ಯಾತರಾದವರು. ಅವರ ಬಿರುದನ್ನು ರೋಹಿತ್ ಗೆ ರಿತಿಕಾ ನೀಡಿರುವುದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕ್ಯಾಪ್ಟನ್ ಕೂಲ್ ಎಂದು ಯಾರಾದರೂ ಇದ್ದರೆ ಅದು ಧೋನಿ ಮಾತ್ರ. ಅವರ ಹೆಸರನ್ನು ಬೇರೆಯವರಿಗೆ ಕರೆಯಬೇಡಿ ಎಂದು ರಿತಿಕಾ ಮೇಲೆ ಅಭಿಮಾನಿಗಳು ಗರಂ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ