ಸಚಿನ್ ಅಭಿಮಾನಿಗೆ ಧೋನಿ ಕೊಟ್ಟ ಸ್ಪೆಷಲ್ ಗಿಫ್ಟ್!

ಶನಿವಾರ, 2 ಜೂನ್ 2018 (09:14 IST)
ರಾಂಚಿ: ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ ಸುಧೀರ್ ಗೌತಮ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಭಾರತ ಆಡುವ ಪ್ರತೀ ಪಂದ್ಯದಲ್ಲಿ ಮೈ ತುಂಬಾ ತ್ರಿವರ್ಣ ಧ್ವಜದ ಪೈಂಟ್ ಹಚ್ಚಿಕೊಂಡು ಸಚಿನ್ ತೆಂಡುಲ್ಕರ್ ಎಂದು ಬರೆದುಕೊಂಡು ಚಿಯರ್ ಅಪ್ ಮಾಡುವ ಈ ಅಭಿಮಾನಿಗೆ ಧೋನಿ ಮರೆಯಲಾರದ ಉಡುಗೊರೆ ಕೊಟ್ಟಿದ್ದಾರೆ.

ಸಚಿನ್ ಕುರಿತಾದ ಸಿನಿಮಾದಲ್ಲೂ ಈ ಅಭಿಮಾನಿ ಇದ್ದಾನೆ. ಭಾರತ ತಂಡ ಹೋದಲ್ಲೆಲ್ಲಾ ಈತನೂ ಪ್ರವಾಸ ಹೋಗುತ್ತಾನೆ. ಅಂತಿಪ್ಪ ಅಭಿಮಾನಿಗೆ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ಔತಣ ಕೂಟ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಖುಷಿ ವ್ಯಕ್ತಪಡಿಸಿರುವ ಸುಧೀರ್ ‘ಕ್ಯಾಪ್ಟನ್ ಕೂಲ್ ಜತೆಗೆ ವಿಶೇಷ ದಿನ. ಸೂಪರ್ ಫಾರ್ಮ್ ಹೌಸ್ ನಲ್ಲಿ ಸೂಪರ್ ಲಂಚ್. ಈ ಕ್ಷಣಗಳನ್ನು ವರ್ಣಿಸಲು ಆಗದು. ಧೋನಿ ಮತ್ತು ಸಾಕ್ಷಿಗೆ ಧನ್ಯವಾದಗಳು’ ಎಂದು ಸುಧೀರ್ ಬರೆದುಕೊಂಡಿದ್ದಾರೆ. ಜತೆಗೆ ಧೋನಿ ಕುಟುಂಬದ ಜತೆಗೆ ಕೂತು ಊಟ ಮಾಡುವ ಫೋಟೋವನ್ನೂ ಹಾಕಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ