ತೆರಿಗೆ ಕಟ್ಟುವ ವಿಚಾರದಲ್ಲಿ ಬಿಹಾರ-ಜಾರ್ಖಂಡ್ ವಲಯಕ್ಕೆ ಧೋನಿ ನಂ.1

ಮಂಗಳವಾರ, 24 ಜುಲೈ 2018 (11:12 IST)
ರಾಂಚಿ: ಟೀಂ ಇಂಡಿಯಾ ಕ್ರಿಕೆಟಿಗ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರು. ಅವರ ಶ್ರೀಮಂತಿಕೆ ಎಷ್ಟಿದೆಯೆಂದರೆ ಇದೀಗ ಬಿಹಾರ ಮತ್ತು ಜಾರ್ಖಂಡ್ ವಲಯದಲ್ಲೇ ಧೋನಿಯಷ್ಟು ದುಬಾರಿ ಮೊತ್ತದ ತೆರಿಗೆ ಕಟ್ಟುವವರು ಯಾರೂ ಇಲ್ಲವಂತೆ!

2017-18 ನೇ ಸಾಲಿನ ಆದಾಯ ತೆರಿಗೆ ಕಟ್ಟಲು ಕೊನೆಯ ದಿನಾಂಕ ಇದೇ ತಿಂಗಳಿಗೆ ಕೊನೆಯಾಗಲಿದ್ದು, ಧೋನಿ ಬರೋಬ್ಬರಿ 12. 17 ಕೋಟಿ ರೂ. ವೈಯಕ್ತಿಕ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಕೆಟ್ ಅಲ್ಲದೆ, ಹಲವು ರಾಯಭಾರಿ, ಜಾಹೀರಾತುಗಳಿಂದಲೂ ಧೋನಿ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಬಿಸಿಸಿಐಯ ಎ ದರ್ಜೆಯ ಆಟಗಾರ ಧೋನಿ.  ಹಾಕಿ ಇಂಡಿಯಾ ಲೀಗ್, ಫುಟ್ಬಾಲ್ ತಂಡ, ಹಲವಾರು ಫೈವ್ ಸ್ಟಾರ್ ಹೋಟೆಲ್ ಗಳನ್ನೂ ಧೋನಿ ಹೊಂದಿದ್ದಾರೆ. ಕಳೆದ ವರ್ಷ ಧೋನಿ 10.93 ಕೋಟಿ ರೂ. ತೆರಿಗೆ ಪಾವತಿಸಿದ್ದರು. ಈ ವರ್ಷ ಅದು ಇನ್ನೂ ಏರಿಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ