ನವದೆಹಲಿ: ಕ್ರಿಕೆಟಿಗ ಧೋನಿ ಆಧಾರ್ ಕಾರ್ಡ್ ಮಾಡಿಸುವಾಗ ನೀಡಿದ ವೈಯಕ್ತಿಕ ದಾಖಲೆಗಳನ್ನು ಬಹಿರಂಗಗೊಳಿಸಿದ್ದಕ್ಕೆ ಸಚಿವ ರವಿಶಂಕರ್ ಪ್ರಸಾದ್ ರನ್ನು ಪ್ರಶ್ನಿಸಿದ ಸಾಕ್ಷಿ ಸಿಂಗ್ ಗೆ ಈಗ ಬೈಗುಳಗಳ ಸುರಮಳೆಯಾಗುತ್ತಿದೆ.
ಧೋನಿ ದಾಖಲೆಗಳನ್ನು ಬಹಿರಂಗಗೊಳಿಸಿದ ಸಂಸ್ಥೆಯನ್ನು ಪ್ರಶ್ನಿಸುವಾಗ ಸಾಕ್ಷಿ ಟ್ವಿಟರ್ ನಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗೆ ಎಲ್ಲಿದೆ ಖಾಸಗಿ ಜೀವನಕ್ಕೆ ರಕ್ಷಣೆ ಎಂದು ಪ್ರಶ್ನಿಸಿದ್ದರು. ಇದನ್ನೀಗ ಟ್ವಿಟರಿಗರು ಸಾಕ್ಷಿಗೇ ತಿರುಗುಬಾಣ ಮಾಡಿದ್ದಾರೆ.
ಐಪಿಎಲ್ ಪಂದ್ಯಗಳಿಗೆ ಚಿಕ್ಕ ಉಡುಗೆ ತೊಟ್ಟು ಮೈ ತೋರಿಸಿಕೊಂಡು ಕೂರುವಾಗ ಪ್ರೈವೆಸಿ ನೆನಪಾಗಲಿಲ್ಲವೇ? ಟ್ವಿಟರ್ ನಲ್ಲಿ ಬೆಡ್ ರೂಂನ ಫೋಟೋಗಳನ್ನೆಲ್ಲಾ ಪ್ರಕಟಿಸುವಾಗ ಖಾಸಗಿತನ ಮರೆತುಹೋಯಿತಾ ಎಂದೆಲ್ಲಾ ಸಾಕ್ಷಿಗೆ ಟ್ವಿಟರಿಗರು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ