IND vs ENG: ಹಾರ್ಟ್ ಬ್ರೇಕ್ ನಂತರ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯ ಯಾವಾಗ, ಎಲ್ಲಿ
ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತು ಅಭಿಮಾನಿಗಳ ಹೃದಯ ಚೂರಾಗಿತ್ತು. ಗೆಲುವಿನ ಹೊಸ್ತಿಲವರೆಗೂ ಬಂದು ಸೋತು ನಿರಾಸೆ ಅನುಭವಿಸಿತ್ತು. ಇದರಿಂದ ಹೊರಬಂದು ಭಾರತೀಯ ಆಟಗಾರರು ನಾಲ್ಕನೇ ಪಂದ್ಯಕ್ಕೆ ಸಿದ್ಧರಾಗಬೇಕಿದೆ.
ಈಗಾಗಲೇ ಭಾರತ ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸಿರುವುದರಿಂದ ನಾಲ್ಕನೇ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯವನ್ನು ಸೋತರೆ ಸರಣಿ ಗೆಲ್ಲುವ ಅವಕಾಶ ಕಳೆದುಕೊಳ್ಳಲಿದೆ. ಹೀಗಾಗಿ ನಾಲ್ಕನೇ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಲಿದೆ.
ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23 ರಿಂದ 27 ರವರೆಗೆ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿದೆ. ಕಳೆದ ಪಂದ್ಯದ ಸೋಲಿನ ಕಹಿಯಿಂದ ಹೊರಬಂದು ಮುಂದಿನ ಪಂದ್ಯಕ್ಕೆ ಸಿದ್ಧರಾಗಲು ಟೀಂ ಇಂಡಿಯಾಗೆ ಒಂದು ವಾರದ ಕಾಲಾವಕಾಶ ಸಿಗಲಿದೆ. ಈ ಪಂದ್ಯವೂ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.