ಪಾಕ್ ವಿರುದ್ಧ ಸೋಲಿನ ಸುಳಿವು ಭಾರತಕ್ಕೆ ಮೊದಲೇ ಸಿಕ್ಕಿತ್ತಾ?!

ಸೋಮವಾರ, 19 ಜೂನ್ 2017 (09:17 IST)
ಲಂಡನ್: ಅದ್ಯಾಕೋ ಪ್ರತೀ ಬಾರಿ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಸವಾರಿ ಮಾಡುವ ಟೀಂ ಇಂಡಿಯಾ ನಿನ್ನೆಯ ಫೈನಲ್ ಪಂದ್ಯದ ಸೋಲಿನೊಂದಿಗೆ ಎರಡನೇ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆ ದೇಶದ ವಿರುದ್ಧ ಸೋಲುಂಡಿದೆ.

 
ಆದರೆ ಈ ಸೋಲಿನ ಸುಳಿವು ಭಾರತಕ್ಕೆ ಮೊದಲೇ ಸಿಕ್ಕಿತ್ತಾ? ಪಾಕ್ ಟೂರ್ನಿಯಲ್ಲಿ ಎದ್ದು ಬಂದ ರೀತಿಯಿಂದಲೇ ಟೀಂ ಇಂಡಿಯಾ ಫೈನಲ್ ಪಂದ್ಯದ ವೇಳೆಗೆ ಒತ್ತಡಕ್ಕೆ ಸಿಲುಕಿತ್ತಾ? ಹಾಗೊಂದು ಸಂಶಯ ಕಾಡುತ್ತಿದೆ.

ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗಲೇ ಟೀಂ ಇಂಡಿಯಾ ನಾಯಕ ಕೊಹ್ಲಿ ಮಾತಿನಲ್ಲಿ ಎಂದಿನ ಆತ್ಮವಿಶ್ವಾಸವಿರಲಿಲ್ಲ. ನಾವು ಗೆಲ್ಲಬಹುದು ಎಂದು ಹೇಳಲು ಅವರಿಗೆ ಆತ್ಮವಿಶ್ವಾಸವಿರಲಿಲ್ಲ.

ಅದೆಲ್ಲಾ ಒತ್ತಟ್ಟಿಗಿರಲಿ. ನಿನ್ನೆ ನಡೆದ ಪಂದ್ಯದಲ್ಲೇ ಭಾರತದ ದುರಾದೃಷ್ಟ ಸಾರಿ ಸಾರಿ ಹೇಳುತ್ತಿತ್ತು. ಮೊದಲ ಐದು ಓವರ್ ನಲ್ಲೇ ಪಾಕಿಸ್ತಾನದ ಎರಡು ರನೌಟ್ ಚಾನ್ಸ್ ಮಿಸ್ ಮಾಡಿಕೊಂಡಿದ್ದ ಭಾರತ, ನಂತರ ಒಂದು ವಿಕೆಟ್ ಕಿತ್ತರೂ, ಅದು ನೋ ಬಾಲ್ ಆಗಿತ್ತು. ಅದ್ಯಾಕೋ ನಿನ್ನೆ ಅದೃಷ್ಟ ಭಾರತದ ಬಳಿಯಲ್ಲಿರಲಿಲ್ಲ ಎನ್ನುವುದಕ್ಕೆ ಇನ್ನೊಂದು ಸಾಕ್ಷಿ ಏನು ಗೊತ್ತಾ?

48 ನೇ ಓವರ್ ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಬ್ಯಾಟ್ಸ್ ಮನ್ ಬ್ಯಾಟ್ ಸವರಿಕೊಂಡು ಸಾಗಿದ ಬಾಲ್ ನೇರವಾಗಿ ಸ್ಟಂಪ್ ಬುಡಕ್ಕೇ ತಗುಲಿದರೂ ಬೇಲ್ಸ್ ಮಾತ್ರ ಒಮ್ಮೆ ಕಂಡೂ ಕಾಣದಂತೆ ಎಗರಿ ಯಥಾಸ್ಥಾನದಲ್ಲಿ ಕುಳಿತಿತ್ತು! ಅದೇ ಸಂದರ್ಭದಲ್ಲಿ ಕಾಮೆಂಟರಿ ಮಾಡುತ್ತಿದ್ದ ಗಂಗೂಲಿ, ಭಾರತದ ದುರಾದೃಷ್ಟವೇ  ಸರಿ ಇದು ಎಂದಿದ್ದು ನಿಜಕ್ಕೂ ಸರಿಯಾಗಿತ್ತು!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ