ಶುಬ್ನಂ ಗಿಲ್ ಗೆ ವಿರಾಟ್ ಕೊಹ್ಲಿ ದುಬಾರಿ ವಾಚ್ ಉಡುಗೊರೆ?
ಗಿಲ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಸ್ಟೈಲಿಶ್ ಆಗಿ ಪೋಸ್ ಕೊಟ್ಟ ಫೋಟೋ ಪ್ರಕಟಿಸಿದ್ದರು. ಈ ಫೋಟೋ ಜೊತೆಗೆ ತಮ್ಮ ಸ್ಟೈಲ್ ಮಾಡಿದ ವಸ್ತ್ರ ವಿನ್ಯಾಸಕರ ಹೆಸರುಗಳನ್ನು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕೊಹ್ಲಿ ವಾಚ್ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗಿಲ್ ವಾಚ್ ಬೈ ಕಿಂಗ್ ಎಂದಿದ್ದಾರೆ. ಹೀಗಾಗಿ ಗಿಲ್ ಗೆ ಕೊಹ್ಲಿಯೇ ವಾಚ್ ಉಡುಗೊರೆ ನೀಡಿರಬಹುದು ಎಂದು ಊಹಿಸಲಾಗಿದೆ.