ಟೀಂ ಇಂಡಿಯಾ ಎದುರು ಕೇವಲ 108 ರನ್ ಗೆ ಆಲೌಟ್ ಆದ ನ್ಯೂಜಿಲೆಂಡ್

ಶನಿವಾರ, 21 ಜನವರಿ 2023 (16:37 IST)
Photo Courtesy: Twitter
ರಾಯ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿವೀಸ್ ಕೇವಲ 108 ರನ್ ಗಳಿಗೆ ಆಲೌಟ್ ಆಗಿದೆ.

ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಅಗ್ರ ಕ್ರಮಾಂಕ ಭಾರತದ ವೇಗಿಗಳ ದಾಳಿಗೆ ಸಂಪೂರ್ಣ ಕುಸಿಯಿತು. ಕೇವಲ 15 ರನ್ ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿದವರು ಕಳೆದ ಪಂದ್ಯದ ಹೀರೋ ಬ್ರೇಸ್ ವೆಲ್ ಮತ್ತು ಗ್ಲೆನ್ ಫಿಲಿಪ್ಸ್. ಬ್ರೇಸ್ ವೆಲ್ 22 ರನ್ ಗಳಿಸಿ ಔಟಾದರೆ, ಫಿಲಿಪ್ಸ್ 36 ರನ್ ಗಳಿಸಿದರು. ಬಳಿಕ ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿದ್ದರಿಂದ ತಂಡ 100 ರ ಗಡಿ ದಾಟಿತು.  ಉಳಿದೆಲ್ಲಾ ಬ್ಯಾಟಿಗರದ್ದು ಏಕಂಕಿ ಕೊಡುಗೆ.

ಭಾರತದ ಪರ ಮೊಹಮ್ಮದ್ ಶಮಿ 3, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್ ತಲಾ 2, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಶ್ರಾದ್ಧೂಲ್ ಠಾಕೂರ್ ತಲಾ 1 ವಿಕೆಟ್ ಕಬಳಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 34.3 ಓವರ್ ಗಳಲ್ಲಿ 108 ಕ್ಕೆ ಆಲೌಟ್ ಆಯಿತು. ಭಾರತ ಪಂದ್ಯ ಗೆಲ್ಲಲು 109 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ