ಕೊಹ್ಲಿ ಶತಕವನ್ನಷ್ಟೇ ನೋಡಬೇಡಿ: ಯಜುವೇಂದ್ರ ಚಾಹಲ್
ಈ ಬಗ್ಗೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡಬೇಡಿ. ಅವರು ತಂಡಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಎಂದು ಚಾಹಲ್ ಹೇಳಿದ್ದಾರೆ.
ಅವರು 60-70 ರನ್ ಮೂಲಕ ತಂಡಕ್ಕೆ ನೀಡಿರುವ ಉಪಯುಕ್ತ ಕೊಡುಗೆಯನ್ನು ನಾವು ನೋಡುವುದೇ ಇಲ್ಲ. ಅವರು ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡುತ್ತಿದ್ದೇವೆ. ಎಲ್ಲಾ ಫಾರ್ಮ್ಯಾಟ್ ಗಳಲ್ಲಿ ಅವರ ಸರಾಸರಿ ನೋಡಿ ಎಂದು ಚಾಹಲ್ ಕೊಹ್ಲಿ ಪರವಾಗಿ ಮಾತನಾಡಿದ್ದಾರೆ.